ಬೆಳಗಾವಿ- ಬಹುಶ ವಿಧಾನಸಭೆ ಟಿಕೆಟ್ ಗೂ ಇಷ್ಟೊಂದು ಪೈಪೋಟಿ ನಡೆಯುತ್ತದೆಯೋ ಗೊತ್ತಿಲ್ಲ,ಆದ್ರೆ ಕಾಂಗ್ರೆಸ್ ನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅದಕ್ಕೂ ಮೀರಿ ಪೈಪೋಟಿ ನಡೆಯುತ್ತಿದೆ.ಅನೇಕ ತಿಕ್ಕಾಟ,ಸರಣಿ ಸಭೆಗಳನ್ನು ನಡೆಸಿ ಕೊನೆಗೆ ಇಂದು ಮದ್ಯರಾತ್ರಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಿದೆ.
ಕಾಂಗ್ರೆಸ್ ಭವನದಲ್ಲಿ ಸಭೆ ಮಾಡಿ,ಪೈ ರಿಸಾರ್ಟ್ ನಲ್ಲಿ ಸಮಾಲೋಚಣೆ ಮಾಡಿ ಕೊನೆಗೆ,ನಗರದ ಹೊರ ವಲಯದಲ್ಲುರುವ ಪಂಚತಾರಾ ಹೊಟೆಲ್ ಮಿರೀಯಟ್ ನಲ್ಲಿ ಕಾಂಗ್ರೆಸ್ ನಾಯಕರು ಕುಳಿತುಕೊಂಡು ಕೊನೆಗೆ ಇಂದು ಮದ್ಯರಾತ್ರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿ ಫಾರ್ಮ್ ಹಂಚಿಕೆ ಮಾಡಿದ್ದಾರೆ.
ಬೆಳಗಾವಿಯ ಖಂಜರ್ ಗಲ್ಲಿ ವಾರ್ಡಿನಿಂದ ಮುಜಮ್ಮಿಲ್ಲ್ ಡೋಣಿ ಗೆ ಬಿ ಫಾರ್ಮ್ ಹಂಚಿಕೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕಾಂಗ್ರೆಸ್ ಆಕಾಂಕ್ಷಿಗಳು ಮಿರೀಯಟ್ ಹೊಟೇಲ್ ಗೆ ಧಾವಿಸಿದರು ಕೆಲವರು ಪೋಟೋ ಪೋಜ್ ಕೊಟ್ಟು ಬಿ ಪಾರ್ಮ್ ಪಡೆದುಕೊಂಡು ನಿಟ್ಟಿಸಿರು ಬಿಟ್ಟರೆ ಇನ್ನೂ ಕೆಲವು ಜನ ಆಕಾಂಕ್ಷಿಗಳು ಹೊಟೇಲ್ ಎದುರುಗಡೆ ಮೇರಾ ನಂಬರ್ ಕಬ್ ಆಯೇಗಾ ಎಂದು ಕಾಯುತ್ತಿದ್ದಾರೆ.
ಕ್ರಿಯಾಶೀಲ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಬಸವರಾಜ್ ಶೇಗಾವಿ,ಜಯಶ್ರೀ ಮಾಳಗಿ,ಪುಷ್ಪಾ ಪರ್ವತರಾವ್ ,ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ ಎಂದು ತಿಳಿದು ಬಂದಿದ್ದು,ಮಹಾಂತೇಶನಗರ ವಾರ್ಡಿನಿಂದ ಡಾ.ದಿನೇಶ್ ನಾಶಿಪುಡಿ ಅವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸಿದೆ ಎಂದು ತಿಳಿದು ಬಂದಿದೆ.
ಏಕಕಾಲದಲ್ಲಿ, ಒಟ್ಟಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದ ಕಾಂಗ್ರೆಸ್ ನಾಯಕರು ಅಂತಿಮಗೊಂಡ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಕರೆಯಿಸಿ ಬಿ ಫಾರ್ಮಗಳನ್ನು ಹಂಚುತ್ತಿದ್ದು ಬಿ ಫಾರ್ಮ ಹಂಚುವ ಪ್ರಕ್ರಿಯೆ ಬೆಳಗಿನ ಜಾವದವರೆಗೂ ನಡೆಯುವ ಸಾಧ್ಯತೆ ಇದೆ.