ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಪರಿಷತ್ ಚುನಾವಣೆಯ ಕಾವು ಏರಿದೆ.ವಾಯುವ್ಯ ಪದವೀಧರ, ಹಾಗೂ ಶಿಕ್ಷಕರ ಮತಕ್ಷೇತ್ರದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಘಟಾನುಘಟಿ ನಾಯಕರನ್ನು ಕಣಕ್ಕಿಳಿಸಿದ್ದು.ಕಾಂಗ್ರೆಸ್ ಪಕ್ಷ ನಾಳೆ ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ಮಾಡಲಿದೆ.
ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಿರಿಯ ಕಾಂಗ್ರೆಸ್ ಮುಖಂಡ, ಪ್ರಕಾಶ್ ಹುಕ್ಕೇರಿ,ಹಾಗೂ ಈ ಕ್ಷೇತ್ರದ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ್ ಅವರು ನಾಳೆ ಬುಧವಾರ ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ,ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ,ಹಾಗೂ ಶಾಸಕರು ಮಾಜಿ ಶಾಸಕರು,ಮುಖಂಡರು ಭಾಗಿಯಾಗಲಿದ್ದಾರೆ.
ಬೆಳಗ್ಗೆ ಬೆಳಗಾವಿಯ ರೈಲ್ವೇ ಓವರ್ ಬ್ರೀಡ್ಜ್ ಹತ್ತಿರದ ಮರಾಠಾ ಮಂದಿರದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು ಸಮಾವೇಶ ಮುಗಿದ ಬಳಿಕ, ಪ್ರಕಾಶ್ ಹುಕ್ಕೇರಿ,ಮತ್ತು ಸುನೀಲ್ ಸಂಕ್ ಅವರು ಮದ್ಯಾಹ್ನ 2 ರಿಂದ 3 ಗಂಟೆ ಹೊತ್ತಿಗೆ ನಾಮಪತ್ರ ಸಲ್ಲಿಸಲಿದ್ದಾರೆ.
Tomorrow 25/05/22 @ 11:00am Congress MLC Nomination Function at “Marata Mandir” Function Hall Near Railway over bridge Jakkanakeri Honda, Belagavi. After Function Nomination filing at between 2:00pm to 3:00pm.
Hon’ble AICC Incharge General Secretary Shri Ranadeep Surjewala ji, KPCC President Shri D K Shivkumar ji & WP Satish Jarkiholi ji and MLA’S, MLC’s,. Leaders present.