ಬೆಳಗಾವಿ- ರಾಜ್ಯದ ಬಜೆಟ್ ಮಂಡನೆಯಾದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯಲಿದ್ದು ಮಾರ್ಚ್ 2 ರಂದು ಬೆಳಗಾವಿಗೆ ಆಗಮಿಸುವ ಮಾಜಿ ಸಿಎಂ ಸಿದ್ರಾಮಯ್ಯ ನಾಲ್ಕು ದಿನ ಬೆಳಗಾವಿ ಜಿಲ್ಲೆಯಲ್ಲಿ ಠಿಖಾನಿ ಹೂಡಲಿದ್ದಾರೆ.
ವಿರೋಧ ಪಕ್ಷದ ನಾಯಕರು ಆಗಿರುವ ಸಿದ್ರಾಮಯ್ಯ ನಾಲ್ಕು ದಿನ ಬೆಳಗಾವಿಯಲ್ಲಿ ಇರೋದ್ರಿಂದ,ಸಹಜವಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಳಿಂದ ಬಿರುಸಿನ ಲಾಭಿ ನಡೆಯಲಿದೆ.ಈ ನಾಲ್ಕು ದಿನ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಸಂಘಟನೆಯ ದಿಕ್ಕು ದಿಸೆ ಬದಲಾಯಿಸುವದರಲ್ಲಿ ಸಂದೇಹವಿಲ್ಲ.
ಮೈಸೂರಿನ ಚಾಮುಂಡಿ ದೇವಿಯ ಸನ್ನಿದಾನದಿಂದ,ಬಾದಾಮಿಯ ಬನಶಂಕರಿ ದೇವಿಯ ಸನ್ನಿದಾನಕ್ಕೆ ವಲಸೆ ಹೋಗಿದ್ದ ಮಾಜಿ ಸಿಎಂ ಸಿದ್ರಾಮಯ್ಯ ಈಗ ಸವದತ್ತಿ ಯಲ್ಲಮ್ಮ ದೇವಿಯ ಸನ್ನಿದಾನಕ್ಕೆ ವಲಸೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.ಮಾರ್ಚ್ ಎರಡರಂದು ಬೆಳಗಾವಿಗೆ ಬರಲಿರುವ ಸಿದ್ರಾಮಯ್ಯ ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಪ್ರವಾಸ ಮಾಡಿ,ಈ ಕ್ಷೇತ್ರದ ಕಾಂಗ್ರೆಸ್ ಸಂಘಟನಾ ಶಕ್ತಿಯನ್ನು ಪರಶೀಲಿಸಿದ ಬಳಿಕ,ಈ ಕ್ಷೇತ್ರದಿಂದ ಸ್ಪರ್ದೆ ಮಾಡುವ ವಿಚಾರವನ್ನು ಸಿದ್ರಾಮಯ್ಯ ಬಹಿರಂಗ ಪಡಿಸಲಿದ್ದಾರೆ ಎನ್ನುವ ಮಾಹಿತಿ ಇದೆ.
ಸಿದ್ಧರಾಮಯ್ಯನವರು ನಾಲ್ಕು ದಿನ ಬೆಳಗಾವಿಯಲ್ಲಿ ವಾಸ್ತವ್ಯ ಇರೋದ್ರಿಂದ ಈ ಸಂಧರ್ಭದಲ್ಲಿ ಬೆಳಗಾವಿ ಉತ್ತರ,ದಕ್ಷಿಣ,ಕಿತ್ತೂರು, ಸವದತ್ತಿ,ಹಾಗೂ ಬೆಳಗಾವಿ ಜಿಲ್ಲೆಯ ಇತರ ವಿಧಾನಸಭೆ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಡಿನಲ್ಲಿ ಸಿದ್ರಾಮಯ್ಯ ಸ್ಥಳೀಯ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚನೆ ಮಾಡುವ ಸಾಧ್ಯತೆಗಳಿವೆ.