ಬೆಳಗಾವಿ- ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು,ಕಾಂಗ್ರೆಸ್ ಟಿಕೆಟ್ ಗಾಗಿ ಹನ್ನೊಂದು ಜನ ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ.ಹತ್ತು ಜನ ಆಕಾಂಕ್ಷಿಗಳು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಅವರಿಗೆ ಅರ್ಜಿ ಸಲ್ಲಿಸಿದ್ದು ಲಕ್ಷ್ಮೀ ಪುತ್ರ ಮೃನಾಲ ಹೆಬ್ಬಾಳಕರ್ ಅವರಿಗೆ ಟೆಕೆಟ್ ನೀಡುವಂತೆ ಅವರ ಬೆಂಬಲಿಗರು ಸಚಿವ ತಂಗಡಿಗೆ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸಹಿತ ಅರ್ಜಿ ಹಾಕಿದ್ದು ಮಾಜಿ ಸಂಸದ ಅಮರಸಿಂಹ ಪಾಟೀಲ, ಕಿರಣ ಸಾಧುನವರ,ಅಶೋಕ ಪೂಜಾರಿ,ರಮೇಶ್ ಕುಡಚಿ, ಆಯಿಷಾ ಸನದಿ,ರಾಜದೀಪ ಕೌಜಲಗಿ,ಕಲ್ಪನಾ ಜೋಶಿ,ಸುಜಯ ಗೋಟಡಕಿ,ಪ್ರೇಮಾ ಚಿಕ್ಕೋಡಿ,ಸೇರಿದಂತೆ ಒಟ್ಟು ಹನ್ನೊಂದು ಜನ ಆಕಾಂಕ್ಷಿಗಳಿದ್ದಾರೆ.
ಇಷ್ಟು ದಿನ ಕಿರಣ ಸಾಧುನವರ ಅವರ ಹೆಸರಷ್ಟೇ ಚಾಲ್ತಿಯಲ್ಲಿತ್ತು,ಈಗ ಮಾಜಿ ಸಂಸದ ಅಮರಸಿಂಹ ಪಾಟೀಲ ರಮೇಶ್ ಕುಡಚಿ, ಅಶೋಕ ಪೂಜಾರಿ, ಮೃನಾಲ ಹೆಬ್ಬಾಳಕರ್ ಸಹಿತ ಕಾಂಗ್ರೆಸ್ ಅಖಾಡಕ್ಕೆ ಧುಮುಕಿದ್ದು ವಿಶೇಷವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಚಿತರಾಗಿದ್ದ ಅಶೋಕ ಪೂಜಾರಿ,ಮಾಜಿ ಶಾಸಕ ರಮೇಶ್ ಕುಡಚಿ ಸಹಿತ ಟಿಕೆಟ್ ಗಾಗಿ ಅರ್ಜಿ ಹಾಕುವ ಮೂಲಕ ಪ್ರಬಲ ಪೈಪೋಟಿ ನಡೆಸಿದ್ದಾರೆ. ಜಾರಕಿಹೊಳಿ ಕುಟುಂಬದವರು ಟಿಕೆಟ್ ವಿಚಾರದಲ್ಲಿ ದೂರ ಉಳಿದುಕೊಂಡಿದ್ದು ಚರ್ಚೆಗೆ ಕಾರಣವಾಗಿದೆ.ಮಾಜಿ ಸಂಸದ ಅಮರಸಿಂಹ ಪಾಟೀಲ ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿದ್ದರು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ.