ಬೆಳಗಾವಿ-ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೇಸ್ ಅಧಿವೇಶನ ನಡೆದು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿಶತಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ,ಈ ಕುರಿತು
ಪೂರ್ವ ಭಾವಿ ಸಭೆ ನಡೆಸಿದ ಡಿಸಿಎಂ ಡಿಕೆಶಿ.
ಸಭೆಯ ಬಳಿಕ ಮಾಧ್ಯಮಗೋಷ್ಠಿ ನಡೆಸಿ ಸಮಾವೇಶದ ಕುರಿತು ಮಾಹಿತಿ ಹಂಚಿಕೊಂಡರು.
ಗಾಂಧೀ ಬಾವಿಯಲ್ಲಿ ನೀರು ತಂದು ಚಲ್ಲಿ ಗೃಹಜ್ಯೋತಿ ಘೋಷಣೆ ಮಾಡಿದ್ವಿ.ನೂರು ವರ್ಷದ ಇತಿಹಾಸಕ್ಕೆ ಸಮಾವೇಶ ಸಾಕ್ಷಿಯಾಗಲಿದೆ.ಎಂದರು.
೧೫೦ ಜನ ಎಂಪಿಗಳು ೪೦ ಬಿಸಿಸಿ ಅಧ್ಯಕ್ಷರುಗಳು.
ಕಾಂಗ್ರೇಸ್ ಸದಸ್ಯರು ಸಿಎಂ ಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.೨೬ ರಂದು ಕಾರ್ಯಕಾರಿ ಸಮೀತಿಯ ಸಭೆ ಇರುತ್ತೆ.ಮಾರನೇ ದಿನ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ ಇದೆ. ನಿಂತವರು ಗೆದ್ದವರು ಸೋತವರು ಎಲ್ಲರೂ ಸಹ ಸೇರಲಿದ್ದಾರೆ.ಸಿಪಿಎಡ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ.ನೂರು ಕಡೆ ಕಾಂಗ್ರೇಸ್ ಕಚೇರಿಯನ್ನು ಉದ್ಘಾಟನೆ ಮಾಡಬೇಕು ಎಂದು ಸಿದ್ಧತೆ ಆಗಿದೆ ಎಂದು ಡಿಕೆಶಿ ಹೇಳಿದರು.
ಸೋಮವಾರ ಅಥವಾ ಮಂಗಳವಾರ ವೇಣುಗೋಪಾಲ್ ಹಾಗೂ ಸುರ್ಜೇವಾಲ ಬರ್ತಿದ್ದಾರೆ.
ನಮಗೆ ಅವರು ಮಾರ್ಗದರ್ಶನ ಮಾಡುತ್ತಾರೆ.ಒಬ್ಬೊಬ್ಬ ಶಾಸಕರಿಗೂ ಸಹ ಒಬ್ಬೊಬ್ಬ ನಾಯಕರುನ್ನು ಕರೆದುಕೊಂಡು ಬರುವ ಜವಾಬ್ದಾರಿ ನೀಡಲಾಗಿದೆ. ಬೆಳಗಾವಿ ಮಹಾನಗರದಲ್ಲಿ
ಮೈಸೂರು ದಸರಾ ಯಾವ ರೀತಿ ವಿಜೃಂಭಿಸುತ್ತೊ ಅದೇ ರೀತಿ ಲೈಟಿಂಗ್ ಅರೆಂಜ್ ಮಾಡ್ತಿವಿ.
ಒಂದು ಕಡೆ ಸರ್ಕಾರ ಇನ್ನೊಂದು ಕಡೆ ಪಕ್ಷವೂ ಕೆಲಸ ಮಾಡುತ್ತೆ.ಒಂದು ವಾರಗಳ ಕಾಲ ಲೈಟಿಂಗ್ ವ್ಯವಸ್ಥೆಯನ್ನು ಇಡುತ್ತವೆ.
ಜನ ಬಂದು ನೋಡಿಕೊಂಡು ಹೋಗಬಹುದು ಎಂದರು.
ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿಸೋನಿಯಾ ಗಾಂಧೀ ರಾಹುಲ್ ಗಾಂಧೀ ಹಾಗೂ ಪ್ರಿಯಾಂಕಾ ಗಾಂಧೀ ಬೆಳಗಾವಿಗೆ ಬರ್ತಾರೆ ಇಲ್ಲೆ ತಂಗುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.