Breaking News

ಡಾ.ಮನಮೋಹನ್ ಸಿಂಗ್ ನಿಧನ ಬೆಳಗಾವಿಯಲ್ಲಿ ಮೌನ……

ಬೆಳಗಾವಿ- ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದಿಂದ ಬೆಳಗಾವಿ ಮಹಾನಗರ ಸ್ತಭ್ಧವಾಗಿದೆ.ಮಹಾತ್ಮಾ ಗಾಂಧಿ ಅವರ ಅಧಿವೇಶನದ ಶತಮಾನೋತ್ಸವದ ಆಚರಣೆಗೆ ಬೆಳಗಾವಿಗೆ ಬಂದಿದ್ದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ರಾತ್ರಿಯೇ ದೆಹಲಿಗೆ ಮರಳಿದ್ದಾರೆ.

ಇಂದು ಬೆಳಗಾವಿಯಲ್ಲಿ ನಡೆಯಲಿದ್ದ ಜೈ ಬಾಪು.ಜೈ ಭೀಮ್…ಜೈ ಸಂವಿಧಾನ…ಸಮಾವೇಶ ಹಾಗು ಸುವರ್ಣಸೌಧ ಪಕ್ಕದಲ್ಲಿ ನಿರ್ಮಿಸಲಾಗಿರುವ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಸೇರಿದಂತೆ ಕಾಂಗ್ರೆಸ್ ಪಕ್ಷದ ಇತರ ಕಾರ್ಯಕ್ರಮಗಳು ರದ್ದು ಮಾಡಲಾಗಿದ್ದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ಏಳು ದಿನ ಶೋಕಾಚರಣೆ ಇಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಲೈಟೀಂಗ್ ಆಫ್….

ಡಾ. ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ಹೊರಬರುತ್ತಿದ್ದಂತೆಯೇ ಲೈಟೀಂಗ್ ನಲ್ಲಿ ಮಿಂಚುತ್ತಿದ್ದ ಬೆಳಗಾವಿ ನಗರದಲ್ಲಿ ಕತ್ತಲು ಆವರಿಸಿತು, ಬೆಳಗಾವಿಗೆ ಬಂದಿದ್ದ ಎಲ್ಲ ಕಾಂಗ್ರೆಸ್ ನಾಯಕರು ದೆಹಲಿಯತ್ತ ಮುಖ ಮಾಡಿದ್ರು ನಿಗಧಿತ ಅವಧಿಗೂ ಮುನ್ನ ಬೆಳಗಾವಿ ಲೈಟೀಂಗ್ ಬಂದ್ ಮಾಡಲಾಯಿತು. ಬೆಳಗಾವಿ ಲೈಟೀಂಗ್ ನೋಡಲು ಜನ ಬರುತ್ತಿದ್ದು ಲೈಟೀಂಗ್ ಮುಂದುವರೆಸಬೇಕೋ ಅಥವಾ ಸ್ಥಗಿತಗೊಳಿಸಬೇಕೋ ಎನ್ನುವದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತಾಡಿ ಅಂತಿಮ ತೀರ್ಮಾಣ ಕೈಗೊಳ್ಳುವದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ಇಂದು ಸಿಪಿಎಡ್ ಮೈದಾನದಲ್ಲಿ ಶೋಕ ಸಭೆ

ನಿನ್ನೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯನ್ನು ಬೆಳಗಾವಿ ಕ್ಲಬ್ ರಸ್ತೆಯ ಸಿಪಿಇಡಿ ಮೈದಾನದಲ್ಲಿ ಇಂದು (ಶುಕ್ರವಾರ) ಬೆಳಗ್ಗೆ 10.30 ಕ್ಕೆ ಏರ್ಪಡಿಸಲಾಗಿದೆ.

ಇಂದು ನಡೆಯಬೇಕಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶ ರದ್ದು ಮಾಡಲಾಗಿದ್ದು, ಅದೇ ಸ್ಥಳದಲ್ಲಿ ಈ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಸಮಾವೇಶಕ್ಕೆ ಆಗಮಿಸಿದ್ದ ಸಚಿವರು, ಶಾಸಕರು, ನಾಯಕರು, ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Check Also

ಟ್ರ್ಯಾಕ್ಟರ್ ಹರಿಸಿ, ತಮ್ಮನನ್ನೇ ಕೊಲೆಗೈದ ಪಾಪಿ ಅಣ್ಣಾ

ಬೆಳಗಾವಿ-ಟ್ರ್ಯಾಕ್ಟರ್ ಹರಿಸಿ ಒಡಹುಟ್ಟಿದ ತಮ್ಮನನ್ನೇ ಭೀಕರವಾಗಿ ಕೊಲೆಗೈದ ಪಾಪಿ ಅಣ್ಣಾ, ಹತ್ಯೆ ಮಾಡಿದ ಬಳಿಕ ಠಾಣೆಗೆ ಹಾಜರಾಗಿದ್ದಾನೆ.ಆಸ್ತಿವಿವಾದ, ಕುಡಿತದ ಚಟ, …

Leave a Reply

Your email address will not be published. Required fields are marked *