ಬೆಳಗಾವಿ- ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಬದಲಾಯಿಸುವ ಪ್ರಕ್ರಿಯೆ ನಡೆದು ವರ್ಷ ಪೂರ್ತಿಯಾಗಿದೆ.ಆದ್ರೆ ಇನ್ನುವರೆಗೆ ಅಧ್ಯಕ್ಷರ ಬದಲಾವಣೆ ಆಗಿಲ್ಲ ಈ ಸ್ಥಾನಕ್ಕಾಗಿ ಬೈಲಹೊಂಗಲದ ಮಹಾಂತೇಶ್ ಮತ್ತಿಕೊಪ್ಪ ಮತ್ತು ಬಸವರಾಜ್ ಶೇಗಾಂವಿ ನಡುವೆ ಗುದ್ದಾಟ ಮುಂದುವರೆದಿದೆ.
ಇಬ್ಬರ ನಡುವೆ ಪೈಪೋಟಿ ನಡಯುತ್ತಲೇ ಇದೆ. ಇಬ್ಬರೂ ಹತ್ತು ಹಲವಾರು ಬಾರಿ,ಅಧ್ಯಕ್ಷ ಸ್ಥಾನದ ಆದೇಶ ಪಡೆಯಲು ಹತ್ತು ಹಲವು ಬಾರಿ ಬೆಂಗಳೂರಿಗೆ ಹೋಗಿ ಬರಿಗೈಯಿಂದ ವಾಪಸ್ ಆಗಿದ್ದಾರೆ.ಆದ್ರೆ ಇನ್ನುವರೆಗೆ ಆದೇಶ ಹೊರಬಿದ್ದಿಲ್ಲ.ಗುದ್ದಾಟ ನಿಂತಿಲ್ಲ. ಇವರಿಬ್ಬರನ್ನು ಅಧ್ಯಕ್ಷ ಮಾಡದಿದ್ದರೆ ನಮ್ಮನ್ನಾದರೂ ಅಧ್ಯಕ್ಷ ಮಾಡಿ ಎಂದು ಬೇರೆ ಆಕಾಂಕ್ಷಿಗಳು ಮದ್ಯಪ್ರವೇಶ ಮಾಡಿದ್ದಾರೆ.
ರಾಜಾಸಲೀಂ ಕಾಶಿಮನವರ, ಮೋಹನ್ ರೆಡ್ಡಿ, ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಈಗ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿದ್ದು ಗುಟ್ಟಾಗಿ ಉಳಿದಿಲ್ಲ. ಆದ್ರೆ ಮಹಾಂತೇಶ್ ಮತ್ತಿಕೊಪ್ಪ ಮತ್ತು ಬಸವರಾಜ್ ಶೇಗಾಂವಿ ಇಬ್ಬರೂ ಸಹ ಈಗಲು ಮೇರಾ ನಂಬರ್ ಕಬ್ ಆಯೇಗಾ ? ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಅಧ್ಯಕ್ಷರ ಬದಲಾವಣೆ 2024 ರ ಬದಲು 2025 ಕ್ಕೆ ಆಗಲಿದೆ ಎಂದು ಹೇಳಲಾಗುತ್ತಿದೆ. ಬೆಳಗಾವಿ ದೊಡ್ಡ ಜಿಲ್ಲೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿನಯ ನಾವಲಗಟ್ಟಿ ಇಬ್ಬರೂ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಸತತವಾಗಿ ಸುಧೀರ್ಘ ಅವಧಿಯವರೆಗೆ ಜಿಲ್ಲಾಧ್ಯಕ್ಷರಾಗಿದ್ದಾರೆ. ಸತತವಾಗಿ ಎರಡು ಬಾರಿ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮಾಜದವರಿಗೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ಸರ್ವ ಸಮಾಜಗಳ ಹಿತ ಕಾಯುವ ಪಕ್ಷ ಎಂದು ಪಕ್ಷದ ನಾಯಕರೇ ಹೇಳುವಂತೆ ಈ ಬಾರಿ ಅಧ್ಯಕ್ಷ ಸ್ಥಾನವನ್ನು ಬೇರೆ ಸಮಾಜದವರಿಗೆ ಕೊಡಿ, ಎಂದು ಅನ್ಯ ಸಮಾಜದವರೂ ಅಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಪ್ರಚಾರ ಪಡೆದಿದೆ.
ಈ ಬಾರಿಯೂ ಲಿಂಗಾಯತ ಸಮಾಜಕ್ಕೆ ಸೇರಿದವರೇ ಅಧ್ಯಕ್ಷರಾಗುತ್ತಾರೋ ಅಥವಾ ಈ ಸ್ಥಾನ ಬೇರೆ ಸಮಾಜದ ನಾಯಕನ ಪಾಲಾಗುತ್ತೋ ಎನ್ನುವದನ್ನು ಕಾಯ್ದು ನೋಡಬೇಕಾಗಿದೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಹೀಗಾಗಿ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಎನ್ನುವದು ಕುತೂಹಲ ಮೂಡಿಸಿದೆ.