Breaking News
Home / Breaking News / ಅನಂತಕುಮಾರ ಹೆಗಡೆ ವಜಾ ಮಾಡಲು ಬೆಳಗಾವಿ ಕಾಂಗ್ರೆಸ್ ಒತ್ತಾಯ..

ಅನಂತಕುಮಾರ ಹೆಗಡೆ ವಜಾ ಮಾಡಲು ಬೆಳಗಾವಿ ಕಾಂಗ್ರೆಸ್ ಒತ್ತಾಯ..

ಬೆಳಗಾವಿ- ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭಾರತದ ಒಕ್ಕೂಟ ವ್ಯೆವಸ್ಥೆಗೆ ಧಕ್ಕೆ ತರುವ ಹೇಳಿಕೆ ನೀಡುತ್ತಿರುವದನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮೀತಿ ನಗರದಲ್ಲಿ ಪ್ರತಿಭಟನೆ ನಡೆಸಿತು

ಕ್ಲಬ್ ರಸ್ತೆಯ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಅನಂತಕುಮಾರ ಹೆಗಡೆ ಅವರ ಪ್ರತಿಕೃತಿ ಧಹಿಸಿ ಆಕ್ರೋಶ ವ್ಯೆಕ್ತಪಡಿಸಿದರು

ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು ಮನವಿಯಲ್ಲಿ ಏನೇನಿದೆ ನೀವೇ ಓದಿ

ಸನ್ಮಾನ್ಯ ರಾಷ್ಟ್ರಪತಿ ಗಳು ಭಾರತ ಸರ್ಕಾರ ನವದೆಹಲಿ

ಗೌರ್ವಾನಿತ ರಾಷ್ಟ್ರಪತಿಗಳ ಗಮನಕ್ಕೆ

ಭಾರತ ದೇಶ ಜಾತ್ಯಾತೀತ ಧರ್ಮಾತೀತ,ಬಹು ಭಾಷಾ ಸಂಸ್ಕೃತಿಯ ದೇಶವಾಗಿದೆ ಇಲ್ಲಿಯ ಸಂಸ್ಕೃತಿ ಸೊಗಡು ಜಗತ್ತನ್ನೇ ಆಕರ್ಷಿಸುವ ಶಕ್ತಿ ಹೊಂದಿದೆ ನಮ್ಮ ದೇಶದಲ್ಲಿ ಇರುವ ಸಾಮರಸ್ಯ ಬೇರೆ ಯಾವ ದೇಶದಲ್ಲಿಯೂ ಕಾಣಲು ಸಿಗುವದಿಲ್ಲ

ಅನೇಕ ಧರ್ಮೀಯರು ಭಾರತದಲ್ಲಿ ಸಹೋದರತ್ವವನ್ನು ಮೈಗೂಡಿಸಿ ದೇಶದ ಏಕತೆ ಮತ್ತು ಐಕ್ಯತೆಗೆ ಸಾಕ್ಷಿಯಾಗಿದ್ದಾರೆ ಎಲ್ಲ ಧರ್ಮಿಯರ ಹೃದಯ ವೈಶಾಲ್ಯತೆಯಿಂದ ದೇಶದಲ್ಲಿ ಶಾಂತಿ ನೆಲೆಸಿದೆ ಆದರೆ ಕೆಲವರು ಶಾಂತಿಯ ಬೀಡಾದ ಭಾರತದಲ್ಲಿ ತಮ್ಮ ರಾಜಕೀಯ ಲಾಭಗೋಸ್ಕರ ವೈಷಮ್ಯದ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುವ ಮೂಲಕ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವದು ಕಳವಳಕಾರಿ ಸಂಗತಿಯಾಗಿದೆ

ಕರ್ನಾಟಕ ಮೂಲದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ರಾಜಕೀಯ ಲಾಭಗೋಸ್ಕರ ಸಮಾಜದ ಸ್ವಾಸ್ಥ್ಯ ಕೆಡೆಸುವ ಪ್ರಯತ್ನ ಮಾಡುತ್ತಿದ್ದಾರೆ ಭಾರತದಲ್ಲಿ ಬೇರೆ ಸಂವಿಧಾನ ರೂಪಿಸಲು ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಹೇಳುವ ಮೂಲಕ ಭಾರತ ರತ್ನ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ನಮ್ಮ ದೇಶದ ಸಂವಿಧಾನವನ್ನು ಪ್ರಶ್ನಿಸಿ ದೇಶದ ಏಕತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ

ಅನಂತಕುಮಾರ ಹೆಗಡೆ ಅವರ ನಾಲಿಗೆಗೆ ಲಗಾಮು ಹಾಕುವದರಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ ಕೆಲ ವರ್ಷಗಳಿಂದ ನನಗೆ ಮುಸ್ಲೀಂ ಮತಗಳ ಅವಶ್ಯಕತೆ ಇಲ್ಲ ಎಂದು ಹೇಳಿ ದೇಶದಲ್ಲಿ ವಿವಾದ ಸೃಷ್ಠಿಸಿದ್ದ ಅನಂತಕುಮಾರ ಹೆಗಡೆ ಈಗ ದೇಶದ ಸಂವಿಧಾನವನ್ನೇ ಪ್ರಶ್ನಿಸುವ ಮೂಲಕ ಮತ್ತೊಂದು ವಿಷ ಉಗಳಿದ್ದಾರೆ
ರಾಷ್ಟ್ರದ ಘನತೆ,ಏಕತೆ ಐಕ್ಯತೆ ಮತ್ತು ದೇಶದ ಸಾಮರಸ್ಯ ಹಾಳು ಮಾಡುತ್ತಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ವಿರುದ್ಧ ಕೂಡಲೇ ಶಿಸ್ತಿನ ಕ್ರಮ ಜರುಗಿಸಿ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ ಅನಂತಕುಮಾರ ಹೆಗಡೆ ಅವರನ್ನು ಬಂಧಿಸಿ ದೇಶದ ಸಾಮರಸ್ಯವನ್ನು ಕಾಪಾಡಬೇಕು ಎಂದು ತಮ್ಮಲ್ಲಿ ಕಳಕಳಿಯ ವಿನಂತಿ

ವಿನಯ ನಾವಲಗಟ್ಟಿ
ಜಿಲ್ಲಾಧ್ಯಕ್ಷರು ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮೀತಿ ಬೆಳಗಾವಿ

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *