ಬೆಳಗಾವಿ- ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಹಂಚಿಕೆ ಮಾಡುವಾಗ ನಿರ್ಲಕ್ಷ್ಯಗೊಳಗಾಗಿರುವ ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಪಕ್ಷ ಈಗ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಹಂಚಿಕೆ ಮಾಡುವ ವಿಚಾರದಲ್ಲಿ ನ್ಯಾಯ ದೊರಕಿಸಿ ಕೊಡಬಹುದೇ ಎಂದು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಕಾಯುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಕ್ರಿಯಾಶೀಲ ಕಾಂಗ್ರೆಸ್ ನಾಯಕರಾದ ವಿನಯ ನಾಲಗಟ್ಟಿ,ಮತ್ತು ಸುನೀಲ ಹನಮಣ್ಣವರ ಇಬ್ಬರೂ ಎಂಎಲ್ಸಿ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಅವರು ಈಗಾಗಲೇ ಒಂದು ಸುತ್ತು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ತಮಗೆ MLC ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.ಬೆಳಗಾವಿಯ ಕಾಂಗ್ರೆಸ್ ನಾಯಕ ಸುನೀಲ ಹನಮಣ್ಣವರ ಅವರು ಎಲ್ಲಿಲ್ಲದ ಲಾಭಿ ನಡೆಸಿದ್ದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರನ್ನು ಭೇಟಿಯಾಗಿ MLC ಆಗಲು ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಲಾಭಿ ನಡೆಸಿದ್ದಾರೆ.
ವಿನಯ ನಾವಲಗಟ್ಟಿ ಮತ್ತು ಸುನೀಲ ಹನಮಣ್ಣವರ ಇಬ್ಬರೂ ನಾಯಕರು ಬೆಳಗಾವಿ ಜಿಲ್ಲೆಯ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇಬ್ಬರಿಗೂ ಬೇಕಾದವರು,ವಿನಯ ಮತ್ತು ಸುನೀಲ ಇಬ್ಬರೂ ಸಹ ಜಾರಕಿಹೊಳಿ,ಮತ್ತು ಹೆಬ್ಬಾಳಕರ್ ಅವರು ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಹೀಗಾಗಿ ಎಂಎಲ್ಸಿ ಸ್ಥಾನಕ್ಕೆ ಬೆಳಗಾವಿ ಜಿಲ್ಲೆಯಿಂದ ಡಬಲ್ ಧಮಾಕಾ, ಡಬಲ್ ಫೈಟ್ ನಡೆಯುತ್ತಿರುವದು ಸತ್ಯ.
MLC ಆಗಲು ರಾಜ್ಯದಲ್ಲಿ ಘಟಾನುಘಟಿ ಕಾಂಗ್ರೆಸ್ ನಾಯಕರು ಗುದ್ದಾಟ ನಡೆಸಿರುವಾಗ ಈ ವಿಚಾರದಲ್ಲಿ ಬೆಳಗಾವಿ ಜಿಲ್ಲೆಯ ನಾಯಕರಿಗೆ ಎಂಎಲ್ಸಿ ಆಗುವ ಅವಕಾಶ ಸಿಗುವದು ಕಷ್ಟವಾಗಿದ್ದರೂ ಸಹ ಪ್ರಾದೇಶಿಕ ನ್ಯಾಯ ಕೊಡಲು ಕಾಂಗ್ರೆಸ್ ನಿರ್ಧಾರ ಮಾಡಿದ್ರೆ,ಸಾಮಾನ್ಯ ಕಾರ್ಯಕರ್ತರಿಗೆ ಸ್ಥಾನಮಾನ ಕೊಡಲು ಕಾಂಗ್ರೆಸ್ ಹೈ- ಕಮಾಂಡ್ ನಿರ್ಧಾರ ಮಾಡಿದ್ರೆ ಬೆಳಗಾವಿ ಜಿಲ್ಲೆಯ ಇಬ್ಬರಲ್ಲಿ ಒಬ್ಬರು ಲಾಟರಿ ಹೊಡೆಯುವ ಸಾಧ್ಯತೆ ಇದೆ.