Breaking News

ಜನನ ಮರಣಕ್ಕೆ ಡಿಜಿಟಲ್ ಸಹಿ,ಪಾಲಿಕೆಯಲ್ಲಿ ಸೂಪರ್ ಫಾಸ್ಟ ಸೇವೆ..!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದೆ ಪಾಲಿಕೆ ಕಮಿಷ್ನರ್ ಶಶಿಧರ ಕುರೇರ ಅವರು ಸದ್ಧಿಲ್ಲದೇ ಪಾಲಿಕೆ ಆಡಳಿತ ವ್ಯೆವಸ್ಥೆ ಸುಧಾರಿಸುವಲ್ಲಿ ಶ್ರಮಿಸಿ ಸಾರ್ವಜನಿಕ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಜನನ ಹಾಗು ಮರಣ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ದಿನವಿಡೀ ಕಾಯಬೇಕಾಗಿತ್ತು ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡ ದಿನನಿತ್ಯ ಸಾವಿರಾರು ಪ್ರಮಾಣ ಪತ್ರಗಳಿಗೆ ಸಹಿ ಹಾಕಿದ ನಂತರವೇ ಪ್ರಮಾಣ ಪತ್ರ ಸಿಗುವ ಪರಿಸ್ಥಿತಿ ಇತ್ತು ಒಂದು ವೇಳೆ ಅವರು ಬೇರೆ ಕೆಲಸದಲ್ಲಿ ಬ್ಯುಸಿ ಆದರೆ ಜನ ಅವರು ಬರುವವರೆಗೆ ಕಾಯಬೇಕಾಗಿತ್ತು

ಸಾರ್ವಜನಿಕರ ಸಮಸ್ಯೆ ನಿವಾರಿಸಲು ಮತ್ತು ಸಹಾಯಕ  ಅಧಿಕಾರಿಗಳ ಒತ್ತಡ ಕಡಿಮೆ ಮಾಡಲು ಪಾಲಿಕೆ ಆಯುಕ್ತ ಶಶಿಧರ ಕುರೇರ ಹೊಸ ಪದ್ದತಿಯನ್ನು ಜಾರಿಗೆ ತಂದಿದ್ದಾರೆ ಮಹಾನಗರ ಪಾಲಿಕೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಜನನ ಹಾಗು ಮರಣ ಪ್ರಮಾಣ ಪತ್ರಗಳಿಗೆ ಡಿಜಿಟಲ್ ಸಹಿ ಪ್ರಿಂಟ್ ಆಗುವ ವ್ಯೆವಸ್ಥೆ ಸೋಮವಾರದಿಂದಲೇ ಆರಂಭವಾಗಿದೆ

ಈ ವ್ಯೆವಸ್ಥೆಯಿಂದ ಸಾರ್ವಜನಿಕರಿಗೆ ತುಂಬಾ ಅನಕೂಲ ಜೊತೆಗೆ ಪಾಲಿಕೆಯ ಸಿಬ್ಭಂಧಿಗಳು ಹಾಗು ಆರೋಗ್ಯ ವಿಭಾಗದ ಅಧಿಕಾರಿಗಳು ಈಗ ರಿಲ್ಯಾಕ್ಸ ಆಗಿದ್ದಾರೆ

ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ರಸ್ತೆ ಅತೀಕ್ರಮಣ ಮಾಡಿಕೊಂಡವರ ವಿರುದ್ಧ ಸರ್ಜಿಕಲ್ ವಾರ್ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಅತೀಕ್ರಮಣ ತೆರವು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ

ನಗರದ ಗಣಪತಿ ಗಲ್ಲಿ,ಮಾರುತಿ ಗಲ್ಲಿ ಖಡೇ ಬಝಾರ,ಹಾಗು ರವಿವಾರ ಪೇಠೆಯಲ್ಲಿ ಬೀದಿ ವ್ಯಾಪಾರಿಗಳು ಹಾಗು ತಳ್ಳುವ ಗಾಡಿಗಳ ಹಾವಳಿ ಹೆಚ್ಚಾಗುತ್ತಿದೆ ಜೊತೆಗೆ ಇಲ್ಲಿ ವಾಹನಗಳ ಪಾರ್ಕಿಂಗ್ ವಿಪರೀತವಾಗಿರುವದರಿಂದ ನಗರದ ಮಾರುಕಟ್ಟೆಯಲ್ಲಿ ಸಾರ್ವಜನಿಕರು ನಡೆದಾಡುಕೊಂಡು ಹೋಗಲೂ ಹರಸಹಾಸ ಪಡಬೇಕಾಗುದೆ

ಪಾಲಿಕೆ ಆಯುಕ್ತರು ಕೂಡಲೇ ನಗರದಲ್ಲಿ ಹಾಕರ್ಸ ಝೋನ್ ಗಳನ್ನು ಮಾಡಿ ಬೀದಿ ವ್ಯಾಪಾರಿಗಳಿಗೆ ಶಿಸ್ತಿನ ವ್ಯೆವಸ್ಥೆ ಮಾಡಬೇಕಾಗಿದೆ ಇದರ ಜೊತೆಗೆ ಖಂಜರ್ ಗಲ್ಲಿಯಲ್ಲಿರುವ ಪಾಲಿಕೆಯ ಪಾರ್ಕಿಂಗ್ ತಕ್ಷಣ ಶುರು ಮಾಡಿ ಖಡೇಬಝಾರ್ ,ಗಣಪತಿಗಲ್ಲಿ ಹಾಗು ಮಾರುತಿಗಲ್ಲಿಗಳಲ್ಲಿ ದ್ವಿಚಕ್ರವಾಹನಗಳ ಪಾರ್ಕಿಂಗ್ ನಿಷೇಧ ಮಾಡಿದರೆ ನಗರದ ಸಂಚಾರ ವ್ಯೆವಸ್ಥೆಗೆ ಶಿಸ್ತಿನ ಸ್ವರೂಪ ಸಿಗಬಹುದಾಗಿದೆ

ಪಾಲಿಕೆ ಅಧಿಕಾರಿಗಳು ಖಂಜರ್ ಗಲ್ಲಿಯಲ್ಲಿ ಸಿದ್ಧಗೊಂಡಿರುವ ಪಾಲಿಕೆಯ ಪಾರ್ಕಿಂಗ್ ಸ್ಥಳವನ್ನು ಸದುಪಯೋಗ ಮಾಡುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಪಾಲಿಕೆ ಆಯುಕ್ತರು ಈ ಬಗ್ಗೆ ನಿಗಾ ವಹಿಸಿದರೆ ಇನ್ನಷ್ಟು ಜನ ಮೆಚ್ಚುಗೆಯನ್ನು ಗಳಿಸಿ ಪಾಲಿಕೆಯನ್ನು ಜನ ಸ್ನೇಹಿ ಮಾಡಬಹುದು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *