Breaking News
Home / Breaking News / ಬೆಳಗಾವಿ ಪಾಲಿಕೆಯಿಂದ ಸರ್ಜಿಕಲ್ ವಾರ್….!

ಬೆಳಗಾವಿ ಪಾಲಿಕೆಯಿಂದ ಸರ್ಜಿಕಲ್ ವಾರ್….!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಅತೀಕ್ರಮಣ ತೆರವು ಸೇರಿದಂತೆ ನಗರ ಸಂಚಾರ ವ್ಯೆವಸ್ಥೆ ಸುಗಮಗೊಳಿಸಲು ಸರ್ಜಿಕಲ್ ವಾರ್ ಆರಂಭಿಸಿದ್ದು ನಗರದ ಖಡೇಬಝಾರದಲ್ಲಿ ಬೋಲ್ಡೆಜರ್ ಗಳ ಮೂಲಕ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದೆ

ಪಾಲಿಕೆ ಅಧಿಕಾರಿಗಳು ನಗರದ ಖಡೇಬಝಾರನಲ್ಲಿ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುತ್ತಿದ್ದು ಬೀದಿ ವ್ಯಾಪಾರಿಗಳ ವಿರುದ್ಧ ಸಮರ ಸಾರಿದ್ದಾರೆ ಪಾಲಿಕೆ ಅಧಿಕಾರಿಗಳು ಹಾಗು ನಗರದ ಟ್ರಾಫಿಕ್ ಪೋಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ

ಬೆಳಗಾವಿಯ ಖಡೇ ಬಝಾರ ಗಣಪತಿಗಲ್ಲಿ ಮಾರುತಿಗಲ್ಲಿಯಲ್ಲಿ ಬೀದಿ ವ್ಯಾಪಾರಿಗಳು ಹಾಗು ತಳ್ಳುವ ಗಾಡಿಗಳ ಹಾವಳಿಯಿಂದಾಗಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ ಹೀಗಾಗಿ ಪಾಲಿಕೆ ಅಧಿಕಾರಿಗಳು ನಗರದ ಮುಖ್ತ ಮಾರುಕಟ್ಟೆಯಲ್ಲಿ ಧೀಡೀರ್ ಸರ್ಜಿಕಲ್ ವಾರ್ ಆರಂಭಿಸಿದ್ದು ನಗರದ ಟ್ರಾಫೀಕ್ ವ್ಯೆವಸ್ಥೆ ಸುಧಾರಿಸುವ ಸಂಕಲ್ಪ ಮಾಡಿದೆ

ನಗರದಲ್ಲಿ ಮತ್ತೆ ಜೆಸಿಬಿ ಗಳು ಸದ್ದು ಮಾಡುತ್ತಿವೆ ಪಾಲಿಕೆಯ ಕಾರ್ಯಾಚರಣೆಯಿಂದ ರಸ್ತೆ ಅತೀಕ್ರಮಣ ಮಾಡಿಕೊಂಡವರು  ಬೆಚ್ಚಿ ಬಿದ್ದಿದ್ದಾರೆ

Check Also

ಲಕ್ಷ್ಮಣ ಸವದಿಗೆ ಮುಖ್ಯಮಂತ್ರಿ ಆಗ್ರಿ ಅಂತಾ ಆಶೀರ್ವಾದ ಮಾಡಿದವರು ಯಾರು ಗೊತ್ತಾ.??

ಬೆಳಗಾವಿ-ಲಕ್ಷ್ಮಣ ಸವದಿಗೆ ಸಿಎಂ ಆಗುವಂತೆ ಜೈನ ಮುನಿಗಳು ಆಶೀರ್ವಾದ ಮಾಡಿದ್ದಾರೆ.ಮಾಜಿ ಡಿಸಿಎಂ‌ ಲಕ್ಷ್ಮಣ ಸವದಿಗೆ ಜೈನ್ ಮುನಿಗಳಿಂದ ಆಶೀರ್ವಾದ ಮಾಡಿರುವ …

Leave a Reply

Your email address will not be published. Required fields are marked *