ಹುಸಿ ಬಾಂಬ್ ಕರೆ- ಕೋರ್ಟ್ ಆವರಣದಲ್ಲಿ ಆತಂಕ
ಬೆಳಗಾವಿ-ದುಷ್ಕರ್ಮಿಗಳು ಇಂದು ಬೆಳಗಾವಿ ಜೆಎಂಎಫ್ಸಿ ಕೋರ್ಟ್ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಂ ಕರೆ ಮಾಡಿದ್ದರು. ಇದರಿಂದ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಠೀಯಾಗಿತ್ತು. ಇನ್ನೂ ಸ್ಥಳಕ್ಕೆ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೆಎಂಎಫ್ಸಿ ಕೋರ್ಟ್, ಜಿಲ್ಲಾ ಕೋರ್ಟ್ ಆವರಣದಲ್ಲಿ ತಪಾಸಣೆ ನಡೆಸಲಾಯಿತು. ನಂತರ ಇದೊಂದು ಹುಸಿ ಕರೆ ಎಂದು ಪೊಲೀಸರು ಖಚಿತ ಪಡಿಸಿದ್ರು. ಇನ್ನೂ ದೀಢೀರ್ ಕೋರ್ಟ್ ಆವರಣದಲ್ಲಿ ತೀವ್ರ ತಪಾಸಣೆಯಿಂದ ಆತಂಕ ಸೃಷ್ಠಿಯಾಗಿತ್ತು. ಬೆಳಗಾವಿ ನ್ಯಾಯಾಲಯದಲ್ಲಿ ಅನೇಕ ಪ್ರಮುಖ ವಿಚಾರಣೆಗಳು ನಡೆಯುತ್ತಿವೆ. ಆದ್ದರಿಂದ ಕೋರ್ಟ್ ಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ವಕೀಲ ಎನ್. ಆರ್. ಲಾತೂರ್ ಆಗ್ರಹಿಸಿದ್ದಾರೆ.