ಬೆಳಗಾವಿ-ಇವತ್ತು ಸೋಮವಾರ ಸಂಜೆ ಬಿಡುಗಡೆಯಾದ ಕೋವೀಡ್ ಹೆಲ್ತ್ ಬುಲೀಟೀನ್ ಬೆಳಗಾವಿ ಜಿಲ್ಲೆಯ ಜನತೆಗೆ ಸಿಹಿ ಸುದ್ಧಿ ಕೊಟ್ಟಿದೆ. ಇವತ್ತಿನ ಸೊಂಕಿತರ ಸಂಖ್ಯೆ ಗಮನಿಸಿದ್ರೆ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಗೆ ದೊಡ್ಡ ಲಗಾಮು ಬಿದ್ದಿದೆ.
ಇವತ್ತು ಬೆಳಗಾವಿ ಜಿಲ್ಲೆಯಲ್ಲಿ ಕೇವಲ 38 ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ತಾಲ್ಲೂಕಿನಲ್ಲಿ ಕೇವಲ 6 ಜನ ಸೊಂಕಿತರು ಪತ್ತೆಯಾಗಿದ್ದಾರೆ.
ಸೊಂಕಿತರ ಸಂಖ್ಯೆಯಲ್ಲಿ ಬೆಳಗಾವಿ ತಾಲ್ಲೂಕು ಯಾವಾಗಲೂ ಪ್ರಥಮ ಸ್ಥಾನದಲ್ಲಿತ್ತು,ಆದರೆ ಇವತ್ತು ಕೇವಲ 6 ಜನ ಸೊಂಕಿತರು ಮಾತ್ರ ಪತ್ತೆಯಾಗಿದ್ದು ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲ್ಲೂಕಿನ ಜನರ ಆತಂಕ ದೂರಾಗಿದೆ
ಇಂದು ಸೋಮವಾರ ಗೋಕಾಕ್ ಮತ್ತು ಸವದತ್ತಿ ತಾಲ್ಲೂಕಿಗೆ ಬಂಪರ್ ಗಿಪ್ಟ್ ಯಾಕಂದ್ರೆ ಈ ಎರಡೂ ತಾಲ್ಲೂಕುಗಳಲ್ಲಿ ಸೊಂಕಿತರ ಸಂಖ್ಯೆ ಶೂನ್ಯವಾಗಿದೆ
ಬೆಳಗಾವಿ-6
ಅಥಣಿಯಲ್ಲಿ- 5
ಬೈಲಹೊಂಗಲ-1
ಚಿಕ್ಕೋಡಿ-17
ಹುಕ್ಕೇರಿ-4
ಖಾನಾಪೂರ-2
ರಾಮದುರ್ಗ-1
ರಾಯಬಾಗ-1
ಗೋಕಾಕ್-0
ಸವದತ್ತಿ-0
ಇತರೆ-1
ಒಟ್ಟು- 38
ಇಂದು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 38 ಸೊಂಕಿತರು ಮಾತ್ರ ಪತ್ತೆಯಾಗಿದ್ದಾರೆ.
ಸೊಂಕಿತರ ಸಂಖ್ಯೆ ತೀರಾ ಕಡಿಮೆ ಆಗಿದೆ ಅಂತಾ ನಿರ್ಲಕ್ಷ್ಯ ಮಾಡಬೇಡಿ,ಸೋಷಿಯಲ್ ಡಿಸ್ಟನ್ಸ್ ಮೇಂಟೇನ್ ಮಾಡಿ,ತಪ್ಪದೇ ಮಾಸ್ಕ್ ಹಾಕಿ,ಪದೇ ಪದೇ ಸೈನಿಟೈಸರ್ ಉಪಯೋಗಿಸಿ
ಟೇಕ್ ಕೇರ್
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ