ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಕಾಟ ಇಂದು ಶನಿವಾರವೂ ಮುಂದುವರೆದಿದೆ. ಇಂದು ರಾಯಬಾಗ ಕುಡಚಿಯ ಸೊಂಕಿತ ಬಲಿಯಾಗಿದ್ದು ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 5 ಕ್ಕೇರಿದ್ದುಇಂದಿನ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ27ಜನ ಸೊಂಕಿತರು ಪತ್ತೆಯಾಗಿದ್ದಾರೆ.
ಇಂದು ಶನಿವಾರ 27 ಜನ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 383 ಕ್ಕೆ ಏರಿದಂತಾಗಿದೆ.
ಇಂದು ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ 27 ಜನ ಸೊಂಕಿತರ ಪೈಕಿ , ಬೆಳಗಾವಿಯ ಮೂವರು ಜನ ಡಿ ಆರ್ ಪೋಲೀಸ್ ಪೇದೆಗಳು, ಬೆಳಗಾವಿ ನಗರದ ಮಾಳಿ ಗಲ್ಲಿಯ ಬಳೆ ತೊಡಿಸುವ ಮಹಿಳೆ,ಮತ್ತು ಕರವಿನಕೊಪ್ಪ ಗ್ರಾಮದ ಯೋಧ,ಹಾಗು ಕಾಗವಾಡ ಸಮೀಪದ ಶೇಡಬಾಳ ಗ್ರಾಮದ ಒಂದೇ ಕುಟುಂಬದ 5 ಜನರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ. ಇಂದು ಹತ್ತು ಜನ ಸೊಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಪತ್ತೆಯಾದ ಸೊಂಕಿತರ ಏರಿಯಾ
ಅಥಣಿ ತಾಲ್ಲೂಕು 12
ಬೆಳಗಾವಿ ನಗರ ಮತ್ತು ತಾಲ್ಲೂಕು 11
ಖಾನಾಪೂರ ತಾಲ್ಲೂಕು 1
ಸವದತ್ತಿ ತಾಲ್ಲೂಕು 3:
ಒಟ್ಟು 27