Breaking News
Home / Breaking News / ಇಂದು ಒಂದೇ ದಿನ ಬೆಳಗಾವಿಯಲ್ಲಿ ಕೊರೋನಾ ಸೊಂಕಿಗೆ ಇಬ್ಬರು ಬಲಿ

ಇಂದು ಒಂದೇ ದಿನ ಬೆಳಗಾವಿಯಲ್ಲಿ ಕೊರೋನಾ ಸೊಂಕಿಗೆ ಇಬ್ಬರು ಬಲಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮೃತ್ಯು ತಾಂಡವ ಮುಂದುವರೆದಿದ್ದು ಇಂದು ಶನಿವಾರ ಮಹಾಮಾರಿ ವೈರಸ್ ಗೆ ಒಂದೇ ದಿನ ಇಬ್ಬರು ಬಲಿಯಾಗಿದ್ದಾರೆ

ಮದ್ಯಾಹ್ನ ರಾಯಬಾಗ ಕುಡಚಿಯ 70 ವರ್ಷದ ಸೊಂಕಿತ ಸಾವನ್ನೊಪ್ಪಿದರೆ,ಇಂದು ರಾತ್ರಿ 9 ಗಂಟೆಗೆ ಬೆಳಗಾವಿಯ ವೀರಭದ್ರ ನಗರದ 48 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ

ಇಬ್ಬರೂ ಉಸಿರಾಟದ ತೊಂದರೆಯಿಂದಾಗಿ ಭೀಮ್ಸ ಆಸ್ಪತ್ರೆಗೆ ದಾಖಲಾಗಿದ್ದರು ಒಬ್ಬ ಇಂದು ಮದ್ಯಾಹ್ನ ಮೃತಪಟ್ಟರೆ ಮೊತ್ತೊಬ್ಬ ರಾತ್ರಿ ಮೃತಪಟ್ಟಿದ್ದು ,ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿಗೆ ಬಲಿಯಾದವರ ಸಂಖ್ಯೆ 6 ಕ್ಕೇರಿದೆ

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸರಣಿ ಮುಂದುವರೆದಿದ್ದು ಕಳವಳಕಾರಿ ಸಂಗತಿಯಾಗಿದ್ದು ಸಾರ್ವಜನಿಕರು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು,ಸೋಶಿಯಲ್ ಡಿಸ್ಟನ್ಸ್ ಕಾಪಾಡಬೇಕು,ಸೈನಿಟಸರ್ ಉಪಯೋಗಿಸಬೇಕು ತಪ್ಪದೇ ಎಲ್ಲರೂ ಮಾಸ್ಕ್ ಹಾಕಿಕೊಳ್ಳುವದನ್ನು ಮರೆಯಬಾರದು

About BGAdmin

Check Also

ಬೆಳಗಾವಿಯ ICMR ಲ್ಯಾಬ್ ಬಂದ್

ಬೆಳಗಾವಿ-ಬೆಳಗಾವಿಯ ಐಸಿಎಂಆರ್ ಲ್ಯಾಬ್‌ಗೂ ಕೊರೋನಾ ಕಾಟ ತಗಲಿದ್ದು ,ICMR ಲ್ಯಾಬ್‌ನ ಕ್ಯಾಂಟೀನ್‌ನಲ್ಲಿ ಕೆಲಸ ಮಾಡ್ತಿದ್ದ ಮೂವರಿಗೆ ಸೋಂಕು ತಗಲಿದ ಪರಿಣಾಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ