ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಇಂದು ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಶಾಕ್ ಕೊಟ್ಟಿದೆ,ಇಂದು ಏಕಾಏಕಿ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗಿದ್ದು ಇವತ್ತು ಬೆಳಗಾವಿ ಜಿಲ್ಲೆಯಲ್ಲಿ 93 ಸೊಂಕಿತರು ಪತ್ತೆಯಾಗಿದ್ದಾರೆ.
ಬೆಳಗಾವಿ ತಾಲ್ಲೂಕಿನಲ್ಲಿ ಅತೀ ಹೆಚ್ಚು 45 ಸೊಂಕತರು ಪತ್ತೆಯಾಗಿದ್ದು ಅಥಣಿ ತಾಲ್ಲೂಕಿನಲ್ಲಿ 6,ಚಿಕ್ಕೋಡಿ ತಾಲ್ಲೂಕಿನಲ್ಲಿ 17,ಬೈಲಹೊಂಗಲದಲ್ಲಿ 6,ಹುಕ್ಕೇರಿ 4,ಗೋಕಾಕ್ 1,ಖಾನಾಪೂರ 3,ರಾಮದುರ್ಗ 2,ರಾಯಬಾಗ 4,ಸವದತ್ತಿಯಲ್ಲಿ 0, ಇತರೆ 5 ಒಟ್ಟು ಬೆಳಗಾವಿ ಜಿಲ್ಲೆಯಲ್ಲಿ 93 ಸೊಂಕಿತರು ಪತ್ತೆಯಾಗಿದ್ದಾರೆ.
ಕಳೆದ ಎರಡು ವಾರಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 20 ರ ಗಡಿ ದಾಟಿರಲಿಲ್ಲ,ಪ್ರತಿದಿನ ಹತ್ತು ಹದಿನೈದು ,ಎಂಟು ಸೊಂಕಿತರು ಮಾತ್ರ ಪತ್ತೆಯಾಗುತ್ತಿದ್ದರು.ಆದ್ರೆ ಇವತ್ತು ಒಂದೇ ದಿನ ಸೊಂಕಿತರ ಸಂಖ್ಯೆ 90 ರ ಗಡಿ ದಾಟಿ ಶತಕ ದಾಟುವ ಹೊಸ್ತಿಲಲ್ಲಿದೆ ಮಹಾಮಾರಿ ಕೊರೋನಾ.
ಪ್ರತಿಯೊಬ್ಬರು ಕೋವೀಡ್ ನಿಯಮಗಳನ್ನು ಮರೆಯಬೇಡಿ,ಮಾಸ್ಕ್ ಹಾಕೊಳ್ಳಿ,ಸೈನಿಟೈಸರ್ ಉಪಯೋಗಿಸಿ,ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ,ಯಾಕಂದ್ರೆ ಇವತ್ತಿನ ಸೊಂಕಿತರ ಸಂಖ್ಯೆ ನೋಡಿದ್ರೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಅಲೆ ಅಪ್ಪಳಿಸಿದಂತೆ ಗೋಚರವಾಗುತ್ತಿದೆ.
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ.ನಿರ್ಲಕ್ಷ್ಯ ಮಾಡಬೇಡಿ.