Breaking News

ಬೆಳಗಾವಿ ಜಿಲ್ಲೆಯಲ್ಲಿ ಇಂದು ಶನಿವಾರ ಮತ್ತೆ 27 ಜನ ಸೊಂಕಿತರ ಪತ್ತೆ ಒಂದು ಬಲಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಕಾಟ ಇಂದು ಶನಿವಾರವೂ ಮುಂದುವರೆದಿದೆ. ಇಂದು ರಾಯಬಾಗ ಕುಡಚಿಯ ಸೊಂಕಿತ ಬಲಿಯಾಗಿದ್ದು ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 5 ಕ್ಕೇರಿದ್ದುಇಂದಿನ ಹೆಲ್ತ್‌ ಬುಲಿಟೀನ್ ನಲ್ಲಿ  ಬೆಳಗಾವಿ ಜಿಲ್ಲೆಯ27ಜನ ಸೊಂಕಿತರು ಪತ್ತೆಯಾಗಿದ್ದಾರೆ.

ಇಂದು ಶನಿವಾರ 27 ಜನ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 383 ಕ್ಕೆ ಏರಿದಂತಾಗಿದೆ.

ಇಂದು ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ 27 ಜನ ಸೊಂಕಿತರ ಪೈಕಿ , ಬೆಳಗಾವಿಯ ಮೂವರು ಜನ ಡಿ ಆರ್ ಪೋಲೀಸ್ ಪೇದೆಗಳು, ಬೆಳಗಾವಿ ನಗರದ ಮಾಳಿ ಗಲ್ಲಿಯ ಬಳೆ ತೊಡಿಸುವ ಮಹಿಳೆ,ಮತ್ತು ಕರವಿನಕೊಪ್ಪ ಗ್ರಾಮದ ಯೋಧ,ಹಾಗು ಕಾಗವಾಡ ಸಮೀಪದ ಶೇಡಬಾಳ ಗ್ರಾಮದ ಒಂದೇ ಕುಟುಂಬದ 5 ಜನರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ. ಇಂದು ಹತ್ತು ಜನ ಸೊಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ಪತ್ತೆಯಾದ ಸೊಂಕಿತರ ಏರಿಯಾ

ಅಥಣಿ ತಾಲ್ಲೂಕು 12

ಬೆಳಗಾವಿ ನಗರ ಮತ್ತು ತಾಲ್ಲೂಕು 11

ಖಾನಾಪೂರ ತಾಲ್ಲೂಕು 1

ಸವದತ್ತಿ ತಾಲ್ಲೂಕು 3:

ಒಟ್ಟು 27

 

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *