ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ವೈರಸ್ ಉಗ್ರ ಸ್ವರೂಪ ತಾಳಿದೆ ಇಂದು ಶುಕ್ರವಾರ ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ 95 ಜನರಿಗೆ ಸೊಂಕು ತಗಲಿದ್ದು ದೃಡವಾಗಿದೆ
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸಮರ ಸಾರಿದ್ದು ಪ್ರತಿದಿನ ಸೊಂಕಿತರ ಸಂಖ್ಯೆ ಬೆಳೆಯುತ್ತಲೇ ಇದೆ.ಇಂದು ಹೊಸದಾಗಿ ಜಿಲ್ಲೆಯ 95 ಜನರಿಗೆ ಸೊಂಕು ತಗಲಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 700 ರ ಗಡಿ ದಾಟಿ 789 ಕ್ಕೇ ಏರಿಕೆಯಾಗಿದೆ.
ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಮಹಾ ಮಾರಿ ವೈರಸ್ ಗೆ 21 ಜನ ಬಲಿಯಾಗಿದ್ದಾರೆ.789 ರ ಪೈಕಿ 377 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು 391 ಜನರಲ್ಲಿ ಸೊಂಕು ಸಕ್ರೀಯವಾಗಿದ್ದು ಅವರೆಲ್ಲರೂ ಜಿಲ್ಲಾ ಆಸ್ಪತ್ರೆಯ ಕೋವೀಡ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾದ 95ಜನ ಸೊಂಕಿತರಲ್ಲಿ ಬೆಳಗಾವಿ ಸಾಂಬ್ರಾ ಏರ್ ಫೋರ್ಸ್ ತರಬೇತಿ ಶಾಲೆಯ ಕೆಲವರಿಗೆ ಸೊಂಕು ತಗಲಿದೆ ಎಂದು ಗೊತ್ತಾಗಿದೆ.
ಸೊಂಕು ಇದ್ದು ಸೊಂಕಿನ ಲಕ್ಷಣ ಹೊಂದಿರದ ಸೊಂಕಿತರನ್ನು ವಂಟಮೂರಿ ಗ್ರಾಮದ ಪಕ್ಕದಲ್ಲಿರುವ ಹಾಲಬಾವಿ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.