ಬೆಳಗಾವಿ- ಬೆಳಗಾವಿ ಜಿಲ್ಲೆಯ ಜನರ ಜೀವ ಹಿಂಡಿದ ಮಹಾಮಾರಿ ಕೊರೋನಾ ಈಗ ಬೆಳಗಾವಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿರ್ನಾಮ ವಾಗುತ್ತ ಸಾಗಿದೆ
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ವು ಸೊಂಕಿತರು ಪತ್ತೆಯಾಗುತ್ತಿದ್ದರು,ಆದರೆ ಈಗ ಸೊಂಕಿತರ ಸಂಖ್ಯೆ ತೀರಾ ಕಡಿಮೆಯಾಗಿದ್ದು,ಇವತ್ತಿನ ಹೆಲ್ತ್ ಬುಲಿಟೀನ್ ಪ್ರಕಾರ ಇವತ್ತು ಕೇವಲ 5 ಜನ ಸೊಂಕಿತರು ಪತ್ತೆಯಾಗಿದ್ದು,ಬೆಳಗಾವಿ ಜಿಲ್ಲೆಯಲ್ಲಿ ಈಗ ಕೇವಲ 207 ಸೊಂಕಿತರು ಇದ್ದಾರೆ.
ಪ್ರತಿದಿನ ಸಾವಿರಾರು ಶಂಕತರ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತದ್ದು ಪ್ರತಿ ದಿನ ಕೇವಲ ಹತ್ತು ಹದಿನೈದು ಸೊಂಕಿತರು ಪತ್ತೆಯಾಗುತ್ತಿದ್ದರು,ಆದ್ರೆ ಇವತ್ತು 5 ಜನ ಮಾತ್ರ ಸೊಂಕಿತರು ಪತ್ತೆ ಆಗಿದ್ದು ಇಂದು ಒಂದೇ ದಿನ 39 ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇವತ್ತಿನ ಹೆಲ್ತ್ ಬುಲಿಟೀನ್ ಪ್ರಕಾರ 6342 ಶಂಕಿತರ ರಿಪೋರ್ಟ್ ಬರುವದು ಬಾಕಿ ಇದೆ. ಜಿಲ್ಲಾಧಿಕಾರಿ ಹಿರೇಮಠ ಅವರ ವಿಶೇಷ ಕಾಳಜಿ,ಆರೋಗ್ಯ ಇಲಾಖೆಯ ಅಧಕಾರಿಗಳ ನಿರಂತರ ಶ್ರಮ,ಮತ್ತು ಅಪಾರ ಜನಜಾಗೃತಿಯ ಪರಿಣಾಮವಾಗಿ ಮಹಾಮಾರಿ ಕೊರೋನಾ ಬೆಳಗಾವಿ ಜಿಲ್ಲೆಯಿಂದ ಪರಾರಿಯಾಗುತ್ತಿದೆ.
ಈ ಮಹಾಮಾರಿ ಸಂಪೂರ್ಣವಾಗಿ ನಿರ್ನಾಮ ಆಗುವವರೆಗೂ ಸಾರ್ವಜನಿಕರು ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು,ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು.