ಬೆಳಗಾವಿ- ಬಾವಿಯಲ್ಲಿದ್ದ ನೀರಿನ ಮೋಟರ್ ಆನ್ ಮಾಡಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ವ್ಯೆಕ್ತಿಯೊಬ್ಬ ಸಾವನ್ನೊಪ್ಪಿದ ಘಟನೆ ಬೆಳಗಾವಿ ಸಮೀಪದ ಪೀರನವಾಡಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಹುನಶ್ಯಾನಟ್ಟಿ ಗ್ರಾಮದ 35 ವರ್ಷದ ಇಂದ್ರಜೀತ ಪಾವಸೆ ಎಂಬಾತ ಮೃತಪಟ್ಟ ದುರ್ದೈವಿಯಾಗಿದ್ದಾನೆ.ಈತ ಇಂದು ಬೆಳಿಗ್ಗೆ ಪೀರನವಾಡಿಯ ಹೊಲದಲ್ಲಿನ ಮನೆಯ ಹಿತ್ತಲಲ್ಲಿದ್ದ ಬಾವಿಯ ಮೋಟರ್ ಆನ್ ಮಾಡಲು ಹೋದಾಗ ಕಾಲು ಜಾರಿ ಬಾವಿಗೆ ಬಿದ್ದಾಗ, ಮನೆಯಲ್ಲಿದ್ದ ಇವನ ತಾಯಿ ಮತ್ತು ಮಡದಿ ಬಾವಿಯ ಹತ್ತಿರ ಸಹಾಯ ಕೋರಿ ಚೀರಾಡಿದ್ದಾರೆ ಅಕ್ಕ ಪಕ್ಕದಲ್ಲಿ ಯಾರೊಬ್ಬರೂ ಇಲ್ಲದ ಕಾರಣ ಇಂದ್ರಜೀತ್ ಬಾವಿಯಲ್ಲಿ ಮೃತಪಟ್ಟಿದ್ದು,ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ