Breaking News

ಬೆಳಗಾವಿ ಜಿಲ್ಲೆಯಲ್ಲಿ ನಿಲ್ಲದ ಕೊರೋನಾ ಕಾಟ ಇಂದು ಗುರುವಾರ ಮತ್ತೆ 9 ಸೊಂಕಿತರ ಪತ್ತೆ

ಬೆಳಗಾವಿ- ಜಿಲ್ಲೆಯಲ್ಲಿ ಕೊರೋನಾ ಸಂಕಟ ಇವತ್ತು ಗುರುವಾರವೂ ಮುಂದುವರೆದಿದೆ ಇಂದಿನ ರಾಜ್ಯ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 9 ಸೊಂಕಿತರು ಪತ್ತೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಇಂದು ಸೊಂಕಿತರ ಸಂಖ್ಯೆ 450 ಕ್ಕೇರಿದ್ದು ಈ 450 ,ಸೊಂಕಿತರಲ್ಲಿ 342 ಸೊಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು 101 ಜನರಲ್ಲಿ ಮಾತ್ರ ಸೊಂಕು ಸಕ್ರೀಯವಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 7 ಜನ ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅಲ್ಲಿಯ ಪರಿಸ್ಥಿತಿಗೆ ತಕ್ಕಂತೆ,ಕಠಿಣ ಕ್ರಮಗಳನ್ನು ಜರುಗಿಸಲಾಗುತ್ತಿದೆ.ಬೆಳಗಾವಿ ನಗರದಲ್ಲಿ ಮಾಸ್ಕ ಧರಿಸದೇ ಸುತ್ತಾಡುವ ಸಾರ್ವಜನಿಕರಿಗೆ,ಮಹಾನಗರ ಪಾಲಿಕೆಯ ಸಿಬ್ಬಂಧಿಗಳ ತಂಡ ದಂಡ ವಿಧಿಸುವ ಕಾರ್ಯಾಚರಣೆ ಆರಂಭಿಸಿದೆ

ಇಂದು ಪತ್ತೆಯಾದ 9 ಸೊಂಕಿತರ ಪೈಕಿ ಒಬ್ಬರು,ಶಿರಗುಪ್ಪಿ ಗ್ರಾಮ ಇನ್ನೊಬ್ಬರು ಐನಾಪೂರ ಗ್ರಾಮದವರಾಗಿದ್ದು ಉಳಿದವರ 7 ಜನ ಸೊಂಕಿತರ ಪ್ರದೇಶ ಜಿಲ್ಲಾ ಹೆಲ್ತ್ ಬುಲಿಟಿನ್ ಬಿಡುಗಡೆಯಾದ ಬಳಿಕ ಗೊತ್ತಾಗಲಿದೆ.

Check Also

ಮದ್ಯರಾತ್ರಿ ಸಾರಾಯಿ ಹುಡುಕಾಡದಿದ್ದರೆ ಅವರು ಸಿಗುತ್ತಿರಲಿಲ್ಲ……!!

ವೈನ್ ಇಸ್ ಇನ್…ಮೈಂಡ್ ಇಸ್ ಔಟ್ ಆತ ಹೇಳ್ತಾರೆ ಅದು ಸತ್ಯ…. ಆತ ಕಂಠಪೂರ್ತಿ ಕುಡುದಿದ್ದ ಬೆಳಗಾವಿಗೆ ಬರಲು ಬಸ್ …

Leave a Reply

Your email address will not be published. Required fields are marked *