ಬೆಳಗಾವಿಯಲ್ಲಿ ಗುಂಪು ಘರ್ಷಣೆ,ಕಲ್ಲು ತೂರಾಟ,ಓರ್ವನಿಗೆ ಗಾಯ..
ಬೆಳಗಾವಿ- ಯುವಕರ ಎರಡು ಗುಂಪು ಘರ್ಷಣೆ ನಡೆದು,ಪರಸ್ಪರ ಕಲ್ಲು ತೂರಾಟ,ಮಾಡಿ ಓರ್ವ ಯುವಕ ಗಾಯಗೊಂಡ ಘಟನೆ ಬೆಳಗಾವಿಯ ಖಾಸಬಾಗ್ ನಲ್ಲಿ ನಡೆದಿದೆ .
ಬೆಳಗಾವಿಯ ಖಾಸಬಾಗ್ ಹಳೆಯ ಪಿಬಿ ರಸ್ತೆಯಲ್ಲಿರುವ,ಜಯವಂತಿ ಮಂಗಲ ಕಾರ್ಯಾಲಯದ ಎದುರು ಈ ಘಟನೆ ನಡೆದಿದೆ. ಯುವಕರ ಎರಡು ಗುಂಪುಗಳ ನಡುವೆ ಯಾವುದೋ ಕಾರಣಕ್ಕೆ ವಾದವಿವಾದ ನಡೆದು ,ಕಲ್ಲು ತೂರಾಟ ನಡೆದಿದೆ.ಈ ಘಟನೆಯಲ್ಲಿ ಓರ್ವ ಯುವಕ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ಥಳಕ್ಕೆ ಶಹಾಪೂರ ಪೋಲೀಸ್ ಠಾಣೆಯ ಪೋಲೀಸರು ದೌಡಾಯಿಸಿದ್ದು ಪರಿಸ್ಥಿತಿ ಈಗ ಶಾಂತವಾಗಿದ್ದು ನಿಯಂತ್ರಣದಲ್ಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ