ಬೆಳಗಾವಿ- ಕೊರೋನಾ ಮಹಾಮಾರಿಯ ಅಟ್ಟಹಾಸ,ಪದೇ ಪದೇ ಜಾರಿಗೆ ಬರುತ್ತಿರುವ ಲಾಕ್ಡೌನ್, ಅದೆಷ್ಟು ಜೀವ ಹಿಂಡುತ್ತದೆ ಅನ್ನೋದನ್ನು ಯಾರೂ ಉಹಿಸಲು ಸಾಧ್ಯವೇ ಇಲ್ಲ ಲಾಕ್ಡೌನ್ ಎಫೆಕ್ಟ್ ನಿಂದಾಗಿ ಕಳೆದ ಆರು ತಿಂಗಳಿನಿಂದ ಯಾವುದೇ ಕೆಲಸವಿಲ್ಲದೆ ಪರದಾಡುತ್ತಿದ್ದ ಕಾರ್ಮಿಕನೊಬ್ಬ ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಪಕ್ಕದ ಕಂಗ್ರಾಳಿ ಖುರ್ದ ನಲ್ಲಿ ಇಂದು ಬುಧವಾರ ಮದ್ತಾಹ್ನ ನಡೆದಿದೆ.
ವಿಷ ಕುಡಿದ ಪರಿಣಾಮ ಹೆಣ್ಣು ಮಕ್ಕಳಾದ ಅನನ್ಯ. 4 ವರ್ಷ,ಅಂಜಲಿ 8 ವರ್ಷ ಇಬ್ಬರೂ ಸಾವನ್ನಿಪ್ಪಿದ್ದು ತಂದೆ ಅನೀಲ ಬಾಂದೇಕರ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸಿದ್ದು ಇತನ ಆರೋಗ್ಯ ಪರಿಸ್ಥಿರಿಯೂ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಕಂಗ್ರಾಳಿ ಖುರ್ದ ಗ್ರಾಮದ ರಾಮನಗರದಲ್ಲಿ ವಾಸಿಸುತ್ರಿದ್ದ ಅನೀಲ ಬಾಂದೇಕರ ಟೈಲ್ಸ್ ಫಿಟ್ಟಿಂಗ್ ಮಾಡುವ ಕೆಲಸ ಮಾಡುತ್ತಿದ್ದ ಕಳೆದ ಆರು ತಿಂಗಳುಗಳಿಂದ ಲಾಕ್ಡೌನ್ ನಿಂದಾಗಿ ಕೆಲಸ ಸಿಗದೇ ಸಂಕಷ್ಟದ ದಿನಗಳನ್ನು ಕಳೆಯುವಾಗ,ಇವರ ಮನೆಯ ಎದುರು ಯಾರೋ ಮಾಟಮಂತ್ರ ಮಾಡಿಸಿದ ವಸ್ತುಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತ ಮತ್ತಷ್ಟು ನೊಂದುಕೊಂಡಿದ್ದ,ಟೈಲ್ಸ್ ಫಿಟ್ಟಿಂಗ್ ಕೆಲಸ ಸಿಗುತ್ತಿಲ್ಲ ಎಂದು ಅನೀಲ ಬಾಂದೇಕರ ರಿಯಲ್ ಇಸ್ಟೇಟ್ ದಂಧೆ ಮಾಡಲು ಹೋಗಿ ಅಲ್ಲಿಯೂ ಲಾಸ್ ಆಗಿದ್ದ ಎಂದು ಬಾಂಧೇಕರ ಕುಡುಂಬ ಮೂಲಗಳು ತಿಳಿಸಿವೆ.
ಬುಧವಾರ ಮದ್ಯಾಹ್ 12 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ಇಬ್ಬರೂ ಮಕ್ಕಳಿಗೆ ವಿಷ ಕೊಟ್ಟು ಸಾಯಿಸಿ ನಂತರ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಞುವ ಪ್ರಯತ್ನ ಮಾಡಿದ್ದಾನೆ.ಇಬ್ಬರು ಮಕ್ಕಳು ಮೃತಪಟ್ಟಿದ್ದು ತಂದೆ ಅನೀಲ ಮಾತ್ರ ಬದುಕುಳಿದಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈತ ಮದ್ಯಾಹ್ನ 12 ಗಂಟೆಗೆ ವಿಷ ಕುಡಿದಿದ್ದು ,ಮೂರು ತಾಸಿನ ಬಳಿಕ ವಿಷ ಕುಡಿದಿರುವ ವಿಷಯ ಅಕ್ಕಪಕ್ಕದವರಿಗೆ ಗೊತ್ತಾಗಿದೆ.ಎಪಿಎಂಸಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.