ನಿಪ್ಪಾಣಿಯಲ್ಲಿ ಓರ್ವ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. 22 ವರ್ಷದ ಅಭಿಷೇಕ ದತ್ತವಾಡೆ ಕೊಲೆಯಾದ ಯುವಕ. ಅಭಿಷೇಕ ವಾಸಿಸುತ್ತಿದ್ದ ಮನೆಯಲ್ಲೇ ಕೊಲೆಗೈಯ್ಯಲಾಗಿದೆ.
ಮೂಲತಃ ಕೊಲ್ಲಾಪುರ ನಿವಾಸಿಯಾಗಿದ್ದ ಅಭಿಷೇಕ ನಿಪ್ಪಾಣಿಯ ನಿರಾಳೆ ಗಲ್ಲಿಯಲ್ಲಿ ತಾಯಿಯೊಡನೆ ವಾಸಿಸುತ್ತಿದ್ದ. ಖಾಸಗಿ ಚಿತ್ರಮಂದಿರದಲ್ಲಿ ಕೆಲಸ ಮಾಡುತಿದ್ದ.ನಿನ್ನೆ ರಾತ್ರಿ ೧ ಗಂಟೆ ಸುಮಾರಿಗೆ ಅಭಿಷೇಕನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಹಣದ ವ್ಯವಹಾರದ ಸಂದೇಹ ವ್ಯಕ್ತವಾಗಿದೆ.
ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.ನಿಪ್ಪಾಣಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ