ಬೆಳಗಾವಿ-ಉಪ್ಪೀಟದಲ್ಲಿ ವಿಷ ಹಾಕಿ ಗಂಡನಿಗೆ ತಿನಿಸಿ ಗಂಡನನ್ನೇ ಖತಂ ಮಾಡಲು ಖತರ್ನಾಕ್ ಹೆಂಡತಿ ಮಾಡಿದ ಮರ್ಡರ್ ಪ್ಲ್ಯಾನ್ ಫೇಲ್ ಆಗಿದ್ದು ವಿಷಪೂರಿತ ಉಪ್ಪೀಟು ತಿಂದ ಮನೆಯ ಸಾಕು ನಾಯಿ ಮತ್ತು ಬೆಕ್ಕು ಎರಡೂ ಖಲ್ಲಾಸ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಸವದತ್ತಿ ತಾಲ್ಲೂಕಿನ ಗೋರಬಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಂಡನ ಹೆಸರಿನಲ್ಲಿದ್ದ ಎರಡು ಎಕರೆ ಜಮೀನು ಗುಳುಂ ಮಾಡಲು ಹೆಂಡತಿ ತನ್ನ ತಮ್ಮನ ಮಾತು ಕೇಳಿ ಉಪ್ಪೀಟದಲ್ಲಿ ವಿಷ ಬೆರೆಸಿ ಗಂಡನಿಗೆ ತಿನಿಸಿದ್ದಾಳೆ ವಿಷಪೂರಿತ ಉಪ್ಪೀಟು ತಿಂದ ಗಂಡ ಅಸ್ವಸ್ಥನಾಗಿ ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಗಂಡ ತಿಂದು ಉಳಿದ ಉಪ್ಪೀಟು ತಿಂದಿರುವ ಮನೆಯ ಸಾಕು ನಾಯಿ ಮತ್ತು ಬೆಕ್ಕು ಎರಡೂ ಉಸಿರು ನಿಲ್ಲಿಸಿವೆ.ಗಂಡ ನಿಂಗಪ್ಪಾ ಫಕೀರಪ್ಪ ಹಮಾನಿ ಬದುಕಿದ್ದು ಪವಾಡ.
ಗಂಡನಿಗೆ ಉಪ್ಪೀಟದಲ್ಲಿ ವಿಷ ಬೆರೆಸಿ ಗಂಡನಿಗೆ ತಿನಿಸಿದ ಹೆಂಡತಿ ಸಾವಕ್ಕಾ ನಿಂಗಪ್ಪಾ ಹಮಾನಿ ಹಾಗೂ ಹೀಗೆ ಮಾಡುವಂತೆ ಹೇಳಿಕೊಟ್ಟ ಸಾವಕ್ಕನ ತಮ್ಮ ಫಕೀರಪ್ಪ ಲಕ್ಷ್ಮಣ ಸಿಂದೋಗಿ ಇಬ್ಬರೂ ಜೈಲು ಪಾಲಾಗಿದ್ದಾರೆ.
ಈ ಪ್ರಕರಣದಲ್ಲಿ ನಾಯಿ ಮತ್ತು ಬೆಕ್ಕು ಎರಡೂ ಮೂಕ ಪ್ರಾಣಿಗಳು ಬಲಿಯಾಗಿದ್ದರೂ ಸಹ ಆರೋಪಿಗಳ ವಿರುದ್ಧ 302 ಬದಲಾಗಿ ಅಟೆಂಪ್ ಟೂ ಮರ್ಡರ್ 307 ಕಲಂ ಮಾತ್ರ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ