ಬೆಳಗಾವಿ- ಇಬ್ಬರೂ ಗೆಳೆಯರೂ ಹೌದು,ಇಬ್ಬರೂ ಕೂಡಿ ಎಮ್ಮೆ ಕಳ್ಳತನ ಮಾಡಿದ್ದು ಹೌದು ಆದ್ರೆ ಇಬ್ಬರ ನಡುವೆ ಲೇವಾದೇವಿಯಲ್ಲಿ ಲಪಡಾ ಆಗಿದ್ದು ಹೌದು. ಆದ್ರೆ ಆತ ಗೆಳೆಯನ ಮರ್ಡರ್ ಮಾಡಲು ಆ ಖಾಸಗಿ ವಿಡಿಯೋ ಕಾರಣವೇ ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.
ಅವರಿಬ್ಬರೂ ಪ್ರಾಣ ಸ್ನೇಹಿತರು ಒಳ್ಳೆದು ಮಾಡ್ಲಿ ಕೆಟ್ಟದ್ದು ಮಾಡ್ಲಿ ಇಬ್ಬರೂ ಸೇರಿಯೇ ಮಾಡ್ತಿದ್ರು ಆದ್ರೆ ಇತ್ತಿಚಿಗೆ ಅವರಿಬ್ಬರ ಮಧ್ಯೆ ಹಣದ ವ್ಯವಹಾರಕ್ಕೆ ವೈಷಮ್ಯ ಬೆಳೆದು ನೀನೊಂದು ತೀರ ನಾನೊಂದು ತೀರ ಎಂಬಂತಾ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮನೆಯಲ್ಲಿ ಕುಳಿತಿದ್ದ ಪ್ರಾಣ ಸ್ನೇಹಿತನನ್ನು ಮನೆಯವರಗೆ ಬಂದು ಕರೆದುಕೊಂಡು ಹೋದವ ಮರಳಿ ಮನೆಗೆ ಬರಲೇ ಇಲ್ಲ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬಸ್ತಬಾಡ ಗ್ರಾಮದ ಹೊರವಲಯದಲ್ಲಿ ಹೀಗೆ ಕೊಲೆಯಾಗಿರುವ ಈ ವ್ಯಕ್ತಿಯ ಹೆಸರು ಅಕ್ಬರ್ ಜಮಾದಾರ್ ಅಂತ ವಯಸ್ಸು ಜಸ್ಟ್ (೨೧) ಈ ಫೋಟೊದಲ್ಲಿ ಕಾಣ್ತಿರೋ ಈ ಕಿರಾತಕನ ಹೆಸರು ಮಹಾಂತೇಶ ಪೂಜಾರ ಅಂತ ಇಬ್ಬರೂ ಸಹ ಸ್ನೇಹಿತರಾದ್ರೂ ಸಹ ಇವರಿಬ್ಬರ ಮೇಲೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ಇದ್ವು ಮನೆ ಮುಂದೆ ಕಟ್ಟಿದ ಎಮ್ಮೆಗಳನ್ನು ಕದ್ದು ಬೇರೆಡೆ ಮಾರಾಟ ಮಾಡೋದು ಇವರ ಖಯಾಲಿಯಾಗಿತ್ತು. ಅದ್ಯಾವುದೋ ಕಾರಣಕ್ಕೆ ಅಕ್ಬರ್ ತನ್ನ ಸ್ನೇಹಿತ ಮಹಾಂತೇಶಗೆ ೨.೫ ಲಕ್ಷ ರೂಪಾಯಿ ಹಣ ನೀಡಿದ್ದನಂತೆ ನೀಡಿದ ದುಡ್ಡನ್ನ ವಾಪಸ್ ಕೇಳಿದ್ದಕ್ಕೆ ಹೀಗೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಅಂತ ಕೊಲೆಯಾದ ಅಕ್ಬರ್ ತಂದೆ ಹಾಗೂ ತಾಯಿ ಖೈರೂನ್ ಪೋಲೀಸರಿಗೆ ದೂರು ನೀಡಿದ್ದಾರೆ.
ಮನೆಯಲ್ಲಿಯೇ ಕುಳಿತಿದ್ದ ಅಕ್ಬರನಾ ಈ ಮಹಾಂತೇಶ ಬಂದು ಒಂದು ಫಂಕ್ಷನ್ ಇದೆ ಬಾ ಹೋಗಿ ಬರೋಣ ಅಂತ ಕರೆದುಕೊಂಡು ಹೋಗಿದ್ದನಂತೆ ಬಸ್ತವಾಡದ ಅರಣ್ಯ ಪ್ರದೇಶಕ್ಕೆ ಅಕ್ಬರ್ ನನ್ನು ಕರೆದೊಯ್ದು ಇಬ್ಬರೂ ಮೊದಲು ಮೊದಲು ಮಧ್ಯಪಾನ ಮಾಡಿದ್ದಾರೆ. ಕೊಲೆ ಆರೋಪಿ ಮಹಾಂತೇಶ ತನ್ನ ಗೆಳತಿಯ ಜತೆಗೆ ಕಳೆದಿದ್ದ ಖಾಸಗಿತನದ ವಿಡಿಯೋ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನಂತೆ ಆ ಮೊಬೈಲ್ ಅಕ್ಬರ್ ಕಸಿದುಕೊಂಡಿರುವ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಮಹಾಂತೇಶ ತನ್ನ ಸ್ನೇಹಿತ ಅಕ್ಬರ್ ನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಸಧ್ಯ ಮಹಾಂತೇಶನ ಮೊಬೈಲ್ ಪೊಲೀಸರ ವಶದಲ್ಲಿದ್ದು ಎಫ್ ಎಸ್ ಎಲ್ ಗೆ ಕಳಿಸಿ ಮುಂದಿನ ತನಿಖೆ ಕೈಗೊಳ್ಳುವುದಾಗಿ ಎಸ್ಪಿ ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಸ್ನೇಹಿತರ ಮಧ್ಯೆ ಅದ್ಯಾವ್ಯಾವ ವಿಷಯಗಳಿಗೆ ತಂಟೆ ತಕಾರುಗಳಾಗಿವೆ ಎನ್ನುವುದು ಇನ್ನೂ ಕಗ್ಗಂಟಾಗಿಯೇ ಇದೆ. ಒಂದು ಕಡೆ ಹಣದ ವ್ಯವಹಾರಕ್ಕಾಗಿ ಕೊಲೆ ಆಗಿದೆ ಅಂತ ಅಕ್ಬರ್ ಪೋಷಕರು ಹೇಳ್ತಿದ್ರೆ ಪೊಲೀಸ್ ಮೂಲಗಳೇ ಬೇರೆ ಹೇಳ್ತಿವೆ ಸತ್ಯಾಂಶ ಏನು ಎನ್ನುವುದು ಪೊಲೀಸರ ತನಿಖೆಯ ನಂತರವಷ್ಟೆ ತಿಳಿದು ಬರಬೇಕಿದೆ.