Breaking News

ಪೋಟೋ ಎಡಿಟ್ ಮಾಡಿದ ಇಡೀಯಟ್ ಅರೆಸ್ಟ್….

ಬೆಳಗಾವಿ: ದೇಶಾಧ್ಯಂತ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಅವರ ಡೀಫ್ ಫೇಕ್ ವಿಡಿಯೋ ಸದ್ದು ಮಾಡುತ್ತಿರುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಡೀಫ್ ಫೇಕ್ ಫೋಟೋ ಎಡಿಟ್ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಹಾಗೂ ಆಕೆಯ ಇಬ್ಬರು ಗೆಳತಿಯರ ಪೋಟೋಗಳನ್ನು ನಗ್ನ ಫೋಟೋ ಜೊತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ಕಿರಾತಕ‌ನಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಖಾನಾಪುರದ ಮಂಥನ್ ಪಾಟೀಲ ಎಂಬ ಯುವಕ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಆ ಯುವತಿ ಆತನ ಪ್ರೀತಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ನಿನ್ನ ಮತ್ತು ಸ್ನೇಹಿತೆಯರ ಮಾನ ಹರಾಜು ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದ್ದ. ಆ ಬಳಿಕ ಸಾಮಾಜಿ ಜಾಲತಾಣದಲ್ಲಿ ಆ ಹುಡುಗಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಡೀಫ್ ಫೇಕ್ ಫೋಟೋ ಎಡಿಟ್ ಮಾಡಿ ತಾನು ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಮತ್ತೆ ಇಬ್ಬರು ಹುಡುಗಿಯರು ಜೊತೆಗೆ ಇರುವ ನಗ್ನ ಫೋಟೋ ಅಪ್ ಲೋಡ್ ಮಾಡಿರುವ ಪ್ರಕರಣ ನಾಗರಿಕ ಸಮಾಜವನ್ನೆ ತಲೆತಗ್ಗಿಸುವಂತೆ ಮಾಡಿದೆ.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ನಗ್ನ ಫೋಟೋ ಅಪ್ ಲೋಡ್ ಮಾಡಿ ವಿಕೃತಿ ಮೆರೆದಿರುವ ಮಂಥನ್ ಪಾಟೀಲ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ ಆಗಿದ್ದಾನೆ. ಇನ್ನು ನೊಂದ ಯುವತಿ ಧೈರ್ಯ ಮಾಡಿ ಪೊಲೀಸ್ ಠಾಣೆಗೆ ಬಂದು ಈ ರೀತಿ ನನಗೆ ಅನ್ಯಾಯವಾಗಿದೆ ಎಂದು ದೂರು ನೀಡಿದ್ದಾಳೆ. ತಕ್ಷಣವೇ ಎಚ್ಚೆತ್ತುಕೊಂಡು ಕೇಸ್ ದಾಖಲಿಸಿಕೊಂಡ ಖಾನಾಪುರ ಪೊಲೀಸರು ಆರೋಪಿ ಮಂಥನ್ ನನ್ನು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಆ ಯುವತಿಯ ನಿಜವಾದ ಹೆಸರಿನ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಫೋಟೋ ತೆಗೆದುಕೊಂಡು ಈ ರೀತಿ ಡೀಫ್ ಫೇಕ್ ಫೋಟೋ ತಂತ್ರಜ್ಞಾನದಿಂದ ಎಡಿಟ್ ಮಾಡಿದ್ದ ಆರೋಪಿ, ನಗ್ನ ಫೋಟೋವನ್ನು ಆ ಯುವತಿಯ ಹೆಸರಿನ ನಕಲಿ ಖಾತೆ ತೆರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಅದೃಷ್ಟವಶಾತ್ ಆ ಯುವತಿ ತನಗಾದ ಅನ್ಯಾಯಕ್ಕೆ ಮುಂದೆ ಬಂದು ದೂರು ಕೊಟ್ಟಿದ್ದರಿಂದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸೈಬರ್ ಕ್ರೈಮ್ ನಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ವಿವರಿಸಿದರು.

ಇನ್ನು ರಶ್ಮಿಕಾ ಮಂದಣ್ಣ ಅವರ ಡೀಫ್ ಫೇಕ್ ವಿಡಿಯೋ ಮಾಡಿದ್ದ ಸಾಫ್ಟವೇರ್ ಬಳಸಿಯೂ ಈ ರೀತಿ ನಗ್ನ ಫೋಟೋ ಎಡಿಟ್ ಮಾಡಿರಬಹುದು. ಇಲ್ಲವೇ ನಾರ್ಮಲ್ ಎಡಿಟಿಂಗ್ ನಲ್ಲೂ ಮಾಡಬಹುದಾಗಿದೆ. ಹಾಗಾಗಿ, ಈ ರೀತಿ ಯಾರಿಗಾದ್ರೂ ಅನ್ಯಾಯ ಆಗಿದ್ದರೆ ಹಿಂಜರಿಯದೇ, ಅಂಜದೇ, ಅಳುಕದೇ ನಮ್ಮ ಪೊಲೀಸರ ಬಳಿ ಬಂದು ದೂರು ಕೊಡಿ. ನಾವು ಅರೋಪಿಗಳ ವಿರುದ್ಧ ನಿಶ್ಚಿತವಾಗಿ ಕ್ರಮ ಕೈಗೊಳ್ಳುತ್ತೇವೆ. ನಿಮ್ಮ ಜೊತೆ ಕಟಿಬದ್ಧವಾಗಿ ನಿಲ್ಲುತ್ತೇವೆ ಎಂದು ಡಾ.ಭೀಮಾಶಂಕರ ಗುಳೇದ ಭರವಸೆ ನೀಡಿದರು.

ಯುವತಿ ಧೈರ್ಯಕ್ಕೆ ಎಸ್ಪಿ ಮೆಚ್ಚುಗೆ:

ಈ ರೀತಿ ಪ್ರಕರಣಗಳು ಸಂಭವಿಸಿದಾಗ ಅದೇಷ್ಟೋ ಯುವತಿಯರು ಆತ್ಮಹತ್ಯೆ ದಾರಿ ತುಳಿಯುತ್ತಾರೆ. ಇಲ್ಲವೇ ಸುಮ್ಮನಾಗಿ ಬಿಡುತ್ತಾರೆ. ಆದರೆ ಈ ಯುವತಿ ತನಗಾದ ಅನ್ಯಾಯಕ್ಕೆ ಧೈರ್ಯದಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಹಾಗಾಗಿ, ಪ್ರಕರಣ ಬೆಳಕಿಗೆ ಬಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ಧೈರ್ಯಕ್ಕೆ ಡಾ.ಭೀಮಾಶಂಕರ ಗುಳೇದ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ ರೀತಿ ಯಾರಾದ್ರೂ ಅನ್ಯಾಯಕ್ಕೆ ಒಳಗಾದ್ರೆ ದೂರು ನೀಡುವಂತೆ ಕರೆ ನೀಡಿದ್ದಾರೆ.ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಯುವಕ ಯುವತಿಯರು ಜಾಗೃತರಾಗಬೇಕು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *