ಬೆಳಗಾವಿ-ನಿಂಬೆಹಣ್ಣು ಖರೀಧಿ ಮಾಡಲು ಗೋವಾದಿಂದ ಬೆಳಗಾವಿಗೆ ಬಂದ ವ್ಯಾಪಾರಿಯೊಬ್ಬನಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಬಳಿ ಚಾಕು ತೋರಿಸಿ ಬಂಗಾರದ ಆಭರಣ ನಗದು ಹಣ ಸೇರಿದಂತೆ ಸುಮಾರು ನಾಲ್ಕು ಲಕ್ಷ ರೂ ಲೂಟಿ ಮಾಡಿದ ಘಟನೆ ನಡೆದಿದೆ
ಗೋವಾದಿಂದ ಬಸ್ ಮೂಲಕ ನಿಂಬೆಹಣ್ಣು ಖರೀಧಿಸಲು ಬೆಳಗಾವಿಗೆ ಬಂದ ಸಂದೀಪ ಕಾಶಿನಾಥ ಧೋಡಣಕರ ಎಂಬ ವ್ಯೆಕ್ತಿಗೆ ಬೆಳಗಾವಿಯ ಹೊಸ ಸಿಬಿಟಿ ಬಸ್ ನಿಲ್ದಾಣದ ಬಳಿ ಚಾಕು ತೋರಿಸಿ ಆತನ ಬಳಿ ಇದ್ದ ನಗದು ಹಣ ಮತ್ತು ಬಂಗಾರವನ್ನು ದೋಚಿ ಪರಾರಿಯಾದ ಘಟನೆ ಮಧ್ಯಾಹ್ನ ಹನ್ನೆರಡು ಘಂಟೆ ಸುಮಾರಿಗೆ ನಡೆದಿದೆ
ಪ್ರಕರಣ ದಾಖಲಿಸಿಕೊಂಡಿರುವ ಮಾರ್ಕೇಟ್ ಠಾಣೆಯ ಪೋಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ