ಬೆಳಗಾವಿಯಲ್ಲಿ ತ್ರಿವಳಿ ತಲಾಕ್…ಮಕ್ಕಳೊಂದಿ ಗಂಡನ ಮನೆ ಎದುರು ಅಹೋ ರಾತ್ರಿ ಧರಣಿ….!!
ಬೆಳಗಾವಿ- ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ನಿಷೇಧಿಸಿದ ಬಳಿಕ ಬೆಳಗಾವಿಯ ವೀರಭದ್ರ ನಗರದಲ್ಲಿ ತಲಾಕ್ ಪ್ರಕರಣ ಸದ್ದು ಮಾಡಿದೆ.
ಗಂಡನಿಂದ ತಲಾಕ್ ಪಡೆದಿರುವ ಮಹಿಳೆಯೊಬ್ಬಳು ತನ್ನ ಮೂರು ಮಕ್ಕಳೊಂದಿಗೆ ತಲಾಕ್ ಕೊಟ್ಟ ಗಂಡನ ಮನೆಯ ಎದುರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾಳೆ ಧರಣಿ ನಡೆಸುತ್ತಿರುವ ಮಹಿಳೆಗೆ ಪೋಲೀಸರು ರಕ್ಷಣೆ ಕೊಟ್ಟರೂ ಸಹ ಭಂಡ ಗಂಡ ಮಾತ್ರ ಬಾಗಿಲು ತೆರೆಯುತ್ತಿಲ್ಲ ಹೀಗಾಗಿ ಈ ಮಹಿಳೆ ನ್ಯಾಯಕ್ಕಾಗಿ ಧರಣಿ ಮುಂದುವರೆಸಿದ್ದಾಳೆ.
ಎರಡನೇ ಹೆಂಡತಿಗಾಗಿ ಮೊದಲ ಹೆಂಡತಿ ಮೂರು ಮಕ್ಕಳನ್ನ ಹೊರ ಹಾಕಿದ ಪಾಪಿ ತಂದೆ ಬಾಗಿಲು ಮುಚ್ಚಿಕೊಂಡು ಮನೆಯಲ್ಲೇ ಇದ್ದಾನೆ
ರಾತ್ರಿಯಿಡೀ ಮನೆ ಬಾಗಿಲಲ್ಲಿಯೇ ಕುಳಿತ ಹೆಂಡತಿ ಮಕ್ಕಳು ಮನೆಯ ಎದುರೇ ಊಟ ಮಾಡಿ ಅಲ್ಲಿಯೇ ಮಲಗಿದ್ದಾರೆ.
ಬೆಳಗಾವಿಯ ವೀರಭದ್ರ ನಗರದಲ್ಲಿ ಘಟನೆ ನಡೆದಿದ್ದು
ರಾಜಾಸಾಬ್ ಕೊಲ್ಲಾಪುರೆ ಹೆಂಡತಿ ಮಕ್ಕಳನ್ನ ಹೊರ ಹಾಕಿದ ಭೂಪ ಎಂದು ತಿಳಿದು ಬಂದಿದೆ.
ಕಳೆದ ರಾತ್ರಿಯಿಂದ ಈಗಲೂ ಮನೆಯ ಮುಂದೆಯೇ ಕುಳಿತ ಹೆಂಡತಿ ಮಕ್ಕಳು
ಮೊದಲ ಹೆಂಡತಿ ಸಮೀನಾ ಕೊಲ್ಲಾಪುರೆ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಿ ಹೊರ ಹಾಕಿರುವ ಗಂಡ ರಾಜಾಸಾಬ್
ಎರಡನೇ ಹೆಂಡತಿ ಜತೆಗೆ ಮನೆಯ ಒಳಗೆ ಇದ್ದು
ಇರೋ ಮನೆ ಬಿಟ್ಟು ಎಲ್ಲಿ ಹೋಗಬೇಕೆಂದು ದಿಕ್ಕೆ ತೋಚದೆ ಮನೆ ಬಾಗಿಲಲ್ಲೇ ಹೆಂಡತಿ ಮಕ್ಕಳು ಕಾಯುತ್ತಿದ್ದಾರೆ.
ಪೊಲೀಸರು ಬಂದು ಬಾಗಿಲು ತೆರೆಯುವಂತೆ ಹೇಳಿದ್ರೂ ರಾಜಾಸಾಬ್ ರಾಜಾ ಸಾಬ್ ನಂತೆ ಮನೆಯ ಒಳಗೇ ಇದ್ದಾನೆ
ಇದೊಂದು ತಲಾಕ್ ಪ್ರಕರಣವಾಗಿದ್ದು ಇದನ್ನು ಪೋಲೀಸರು ಗಂಭೀರವಾಗಿ ಪರಿಗಣಿಸುವದು ಅಗತ್ಯ.