ಬೆಳಗಾವಿ- ಟೂರಿಸ್ಟ್ ವೀಜಾ ಪಡೆದು ಬೆಳಗಾವಿಯಲ್ಲಿ ಧರ್ಮ ಪ್ರಚಾರ ನಡೆಸಿದ ಆರೋಪದ ಮೇಲೆ ಬೆಳಗಾವಿಗೆ ಬಂದಿದ್ದ ಇಂಡೋನೇಶಿಯಾ ಜಮಾತಿನ ಹತ್ತು ಸದಸ್ಯರ ಮೇಲೆ ಪ್ರತ್ಯೇಕವಾಗಿ ಎಫ್ ಐ ಆರ್ ದಾಖಲು ಮಾಡಲಾಗಿದೆ.
ಇಂಡೋನೇಶಿಯಾ ಮೂಲದ ಹತ್ತು ಜನ ಟೂರಿಸ್ಟ್ ವೀಜಾ ಪಡೆದು,ದೆಹಲಿಯ ಧರ್ಮ ಸಭೆಯಲ್ಲಿ ಭಾಗವಹಿಸಿ,ಬೆಳಗಾವಿಗೆ ಬಂದಿದ್ದರು ಕಾನೂನಿನ ಪ್ರಕಾರ ಅವರು ಮಿಶ್ನರಿ ವೀಸಾ ಪಡೆಯಬೇಕಾಗಿತ್ತು ಟೂರಿಸ್ಟ ವೀಸಾ ಪಡೆದು ಧರ್ಮ ಪ್ರಚಾರ ನಡೆಸಿದ ಆರೋಪದ ಮೇಲೆ ಹತ್ತೂ ಜನರ ಮೇಲೆ ಮಾಳ ಮಾರುತಿ ಠಾಣೆಯಲ್ಲಿ ಎಫ ಐ ಆರ್ ದಾಖಲು ಮಾಡಲಾಗಿದೆ .
ಈ ಹತ್ತು ಜನರು ಈಗ ಹೋಮ್ ಕ್ವಾರಂಟೈನಲ್ಲಿದ್ದು ಅವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮುಂದಿನ ಪ್ರಕ್ರಿಯೆ ನಡೆಯುವ ಸಾದ್ಯತೆ ಇದೆ
ವೀಸಾ ಪಡೆದುಕೊಳ್ಳುವ ವಿಷಯದಲ್ಲಿ ಇಂಡೋನೇಶಿಯಾ ಮೂಲದ ಹತ್ತು ಜನ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ಅವರ ವಿರುದ್ಧ ಎಫ ಐ ಆರ್ ದಾಖಲಾಗಿದೆ.