Home / Breaking News / ಸೊಂಕಿತರ ಜೊತೆ ಮಾತಾಡಿ,ಅಡಿಯೋ ವಿಡಿಯೋ ವೈರಲ್ ಮಾಡಿದವ ಅರೆಸ್ಟ್…..

ಸೊಂಕಿತರ ಜೊತೆ ಮಾತಾಡಿ,ಅಡಿಯೋ ವಿಡಿಯೋ ವೈರಲ್ ಮಾಡಿದವ ಅರೆಸ್ಟ್…..

ಬೆಳಗಾವಿ:

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ವಿಡಿಯೋ, ಆಡಿಯೋ ಕ್ಲಿಪ್ ವೈರಲ್ ಮಾಡಿದ ಪ್ರಮುಖ ಆರೋಪಿಯನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿ ಅಮಿರ್ ಹಮ್ಜಾ ಬೀಡಿಕರ್ ಬಂಧಿತ ಆರೋಪಿ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಏಳು ಕೊರೊನಾ ಸೋಂಕಿತರ ಮೇಲೆ ನಿಗಾ ಇಡಲಾಗಿದೆ. ಮೊದಲು ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಈ ಮೂವರ ಬಗ್ಗೆ ಆಡಿಯೋ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಸಮಾಜಕ್ಕೆ ತಪ್ಪು ಸಂದೇಶ ಸಾರುವ ಉದ್ದೇಶದಿಂದ ಆರೋಪಿ ವಿಡಿಯೋ ವೈರಲ್ ಮಾಡಿದ್ದನು. ವಿಡಿಯೋ ವೈರಲ್ ಮಾಡಿದ ಆರೋಪಿ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಸಿ ಸೂಚಿಸಿದ್ದರು. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಎಪಿಎಂಸಿ ಪೊಲೀಸರು ಆರೋಪಿ ಬಂಧಿಸಿ
ಆತನ ವಿರುದ್ಧ ಐಪಿಸಿ ಸೆಕ್ಷನ್ 153(A), 188, 504, 505(1) ಸಹಕಲಂ 34ರಡಿ ಕೇಸ್ ದಾಖಲಿಸಿದ್ದಾರೆ.

Check Also

ಚಾಕುವಿನಿಂದ ಇರಿದು, ಬೆಳಗಾವಿ ಜಿಲ್ಲೆಯಲ್ಲಿ ಡಬಲ್ ಮರ್ಡರ್….

ಬೆಳಗಾವಿ: ಅಪ್ರಾಪ್ತ ಮಗಳಿಗೆ ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ ಹಾಗೂ ಆತನ ಸಹೋದರನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ತಂದೆಯೇ ಹತ್ಯೆ …

Leave a Reply

Your email address will not be published. Required fields are marked *