ಮಹಾರಾಷ್ಟ್ರದ ಡ್ರಗ್ ಪೆಡ್ಲರ್ ಬಂಧನ, 120 ಕೆಜಿ ಗಾಂಜಾ ಜಪ್ತಿ
ಬೆಳಗಾವಿ- ಜಿಲ್ಲೆಯ ಡಿಸಿಐಬಿ ಘಟಕದ ಪೊಲೀಸರು ಮಹಾರಾಷ್ಟ್ರದ ಮಿರಜದ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದು, ಆತನಿಂದ ರೂಪಾಯಿ 28.5 ಲಕ್ಷ ಮೌಲ್ಯದ 120 ಕೆಜಿ ಗಾಂಜಾ , ಸ್ವೀಪ್ಟ್ ಕಾರ ಮತ್ತು ಆಕ್ಟಿವ ಹೋಂಡಾ ಸ್ಕೂಟಿ ಜಪ್ತಿ ಮಾಡಿದ್ದಾರೆ
.ಮಿರಜ ಆಶ್ಪಾಕ ಮೈನುದ್ದೀನ ಮುಲ್ಲಾ ( 42) ಬಂಧಿತ ಆರೋಪಿ. ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ಮಿರಜನ ವಶೀಮ್ ಶೇಖ್ ಎಂಬುವರನ್ನು ಬಂಧಿಸಿ, ಆತನಿಂದ 2 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಈತನ್ನು ತೀವ್ರ ವಿಚಾರಣೆ ನಡೆಸಿದ ವೇಳೆ ಈ ಗಾಂಜಾ ಪ್ರಕರಣದಲ್ಲಿ ಮುಖ್ಯ ಆರೋಪಿ ಆಶ್ಪಾಕ ಮುಲ್ಲಾ ಪರಾರಿಯಾಗಿದ್ದ. ಡಿಸಿಐಬಿ ಪೊಲೀಸರು ವಿಶೇಷ ಕಾರ್ಯಾಚಣೆ ನಡೆಸಿ, ಖಚಿತ ಮಾಹಿತಿಗೆ ಮೇರೆಗೆ ಮಿರಜನಲ್ಲಿ ಆರೋಪಿ ಆಶ್ಪಾಕ ಮುಲ್ಲಾ ತೆಲಂಗಾಣ ರಾಜ್ಯದ ವಾರಂಗಣ ಮತ್ತು ಹೈದ್ರಾಬಾದ್ದ ಇಬ್ಬರೂ ವ್ಯಕ್ತಿಗಳಿಂದ ಗಾಂಜಾ ಖರೀದಿಸಿ ಮಿರಜದ ಸುತ್ಮುತ್ತಲಿನ ಪ್ರದೇಶದಲ್ಲಿಟ್ಟು ಮಾರಾಟ ಮಾಡುತ್ತಿದ್ದರು. ಮಹಾರಾಷ್ಟ್ರ ಸಾಂಗಲಿ, ಮಿರಜ, ಚಿಕ್ಕೋಡಿ, ಬೆಳಗಾವಿ, ಧಾರವಾಡಗಳಲ್ಲಿಯೂ ಮಾರಾಟ ಮಾಡುತ್ತಿದ್ದರು.ಮಿರಜ ತಾಲೂಕಿನ ಮೈಶಾಳ ಗ್ರಾಮದ ಹೊರವಲಯದಲ್ಲಿ ದಾಳಿ ಮಾಡಿದ ಪೊಲೀಸರು ಆರೋಪಿ ಆಶ್ಪಾಕನ್ನು ಬಂಧಿಸಿ, ಆತನ ವಾಹನದ ಡಿಕ್ಕಿಯಲ್ಲಿದ್ದ 40 ಕೆಜಿ ಗಾಂಜಾ ಜಪ್ತಿ ಮಾಡಿದರು. ಮೈಶಾಳ ಜತ್ತ ನೀರು ಸರಬರಾಜು ಮಾಡುವ ಪಂಪ ಹೌಸ ಬಳಿ ಸಂಗ್ರಹಿಸಿದ್ದ 78 ಕೆಜಿ ಗಾಂಜಾ ಪ್ಯಾಕೇಟ್ ಗಳನ್ನು ಜಪ್ತಿ ಮಾಡಲಾಯಿತು. 24 ಲಕ್ಷ ಮೌಲ್ಯದ 120 ಕೆಜಿ ಗಾಂಜಾ ಜಪ್ತಿ ಮಾಡಲಾಯಿತು.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಾಂಜಾ ಸರಬರಾಜು ಮಾಡುವ ತೆಲಂಗಾಣ ರಾಜ್ಯದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.