ಬೆಳಗಾವಿ- ನಿನ್ನೆ ಬೆಳಗಾವಿ ಸಮೀಪದ ಮಚ್ಛೆ ಗ್ರಾಮದಲ್ಲಿ ನಡೆದ ಡಬಲ್ ಮರ್ಡರ್ ಕೇಸ್ ಇನ್ನೂ ನಿಗೂಢವಾಗಿಯೇ ಉಳಿದಿದೆ,ಕೊಲೆ ಮಾಡಿದವರು ಯಾರು? ಕೊಲೆಗೆ ಕಾರಣ ಏನು ? ಅನ್ನೋದು ಇನ್ನುವರೆಗೆ ನಿಗೂಢವಾಗಿಯೇ ಉಳಿದಿದೆ.
ನಿನ್ನೆ ಮಚ್ಛೆ ಗ್ರಾಮದಲ್ಲಿ ಇಬ್ಬರು ಮಹಿಳೆಯರನ್ನು ಹಾಡುಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.ಆದ್ರೆ ಇವರು ಕಳೆದ ಎರಡು ವಾರಗಳಿಂದ ಮಚ್ಛೆ ಗ್ರಾಮದಲ್ಲಿ ನೆಲೆಸಿದ್ದರು,ಇದಕ್ಕೂ ಮೊದಲು ಕೊಲೆಯಾದ ಇಬ್ಬರು ಮಹಿಳೆಯರು ಬೆಳಗಾವಿ ಸಮೀಪದ ಕಾಳ್ಯಾನಟ್ಟಿ ಗ್ರಾಮದಲ್ಲಿ ನೆಲೆಸಿದ್ದರಿಂದ ಇಬ್ಬರನ್ನು ಇಂದು ಕಾಳ್ಯನಟ್ಟಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು
ಕೊಲೆಯಾದ ಇಬ್ಬರು ಮಹಿಳೆಯರಲ್ಲಿ ಒಬ್ಬರು ಗರ್ಭಿಣಿ ಯಾಗಿದ್ದರಿಂದ ಅವರ ಅಂತ್ಯಸಂಸ್ಕಾರ ಮಾಡಲು ಕಾಳ್ಯಾನಟ್ಟಿ ಗ್ರಾಮಸ್ಥರು ವಿರೋಧ ಮಾಡಿದ್ರು ಆದ್ರೆ ನಂತರ ಗ್ರಾಮದ ಪಂಚರು ಮಧ್ಯಸ್ಥಿಕೆ ವಹಿಸಿ ಕೊಲೆಯಾದ ಇಬ್ಬರೂ ಮಹಿಳೆಯರ ಅಂತ್ಯ ಸಂಸ್ಕಾರ ಕಾಳ್ಯಾನಟ್ಟಿ ಗ್ರಾಮದಲ್ಲೇ ನೆರವೇರಿಸಿದರು.
ಕೊಲೆಯಾದ ರೋಹಿಣಿ,ಮತ್ತು ರಾಜಶ್ರೀ ಇಬ್ಬರೂ ಗೆಳತಿಯರು,ಇಬ್ಬರೂ ಬೇರೆ ಬೇರೆ ಯುವಕರ ಜೊತೆ ಲವ್ ಮಾಡಿ ಮದುವೆ ಮಾಡಿಕೊಂಡಿದ್ದರು ಇಬ್ಬರೂ ಹಲವಾರು ವರ್ಷಗಳಿಂದ ಕಾಳ್ಯಾನಟ್ಟಿ ಗ್ರಾಮದಲ್ಲೇ ನೆಲೆಸಿದ್ದರು,ಆದ್ರೆ ಯಾಕೋ ಏನೋ ಇಬ್ಬರು ಎರಡು ವಾರದ ಹಿಂದೆ ಊರು ಬಿಟ್ಟು ಕಾಳ್ಯಾನಟ್ಟಿಯಲ್ಲಿ ನೆಲೆಸಿದ್ದರು,ಇಬ್ಬರೂ ಊರು ಬಿಡಲು ಕಾರಣ ಏನು,ಅನ್ನೋದನ್ನು ಈಗ ಪೋಲೀಸರು ತನಿಖೆ ಮಾಡುತ್ತಿದ್ದಾರೆ.
ಕೊಲೆಯಾದ ಇಬ್ಬರೂ ಮಹಿಳೆಯರ ಬದುಕಿನ ಟ್ರ್ಯಾಜಿಡಿ ಏನಿದೆ,ಇವರ ಮೇಲೆ ಯಾರು ದ್ವೇಷ ಸಾಧಿಸಿರಬಹುದು,ಯಾರು ಕೊಲೆ ಮಾಡಿರಬಹುದು ಅನ್ನೋದನ್ನು ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ತನಿಖೆ ಮಾಡುತ್ತಿದ್ದಾರೆ.
ಇಬ್ಬರೂ ಗೆಳೆತಿಯರು ಲವ್ ಮಾಡಿ ಮದುವೆ ಆಗಿದ್ದು ತಪ್ಪಾಯ್ತಾ ಅನ್ನೋದು ಪೋಲೀಸರ ತನಿಖೆಯ ಬಳಿಕ ಗೊತ್ತಾಗಲಿದೆ.ರೋಹಿಣಿ ಹುಲಮಣಿ,21 ರಾಜಶ್ರೀ ಬಣ್ಣೂರ 21 ಕೊಲೆಯಾದ ದುರ್ದೈವಿಗಳು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ