ಬೆಳಗಾವಿ- ರಿಮೋಟ್ ಕಂಟ್ರೋಲ್ ಯುಗದಲ್ಲೂ ಜನ ಮಾಟ ಮಂತ್ರಕ್ಕೆ ಕಂಟ್ರೋಲ್ ಕಳೆದುಕೊಳ್ಳುತ್ತಾರೆ ಅಂದ್ರೆ ನಂಬಲಾಗುತ್ತಿಲ್ಲ,ಪ್ರೇಮ ಕವಿ ಕೆ.ಕಲ್ಯಾಣ ಕುಟುಂಬದಲ್ಲಿ ಮಾಟ ಮಂತ್ರದ ಪ್ರಭಾವ ಬೀರೀದ್ದು ಮೈಯ್ಯಾಗ ಬಂದ ದೇವ್ರು ಆರು ಕೋಟಿ ಆಸ್ತಿ ನುಂಗಿದ ರೋಚಕ ಕಹಾನಿ ಈಗ ಬಯಲಾಗಿದೆ
ಮಾಟ,ಮಂತ್ರವಾದಿ ಶಿವಾನಂದ ವಾಲಿಯ ಆಟ ಬೀಳಗಿಯಿಂದ ಡೈರೇಕ್ಟ್ ಬೆಂಗಳೂರಿಗೆ ತಲುಪಿದೆ,ಬೀಳಗಿಯ ಮಂತ್ರವಾದಿ,ಶಿವಾನಂದ ವಾಲಿ ಕೆ.ಕಲ್ಯಾಣ ಅವರ ಮನೆಯ ಕೆಲಸದವಳನ್ನು ಪಟಾಯಿಸಿ ನಂತರ ಕೆ.ಕಲ್ಯಾಣ ಮನೆಗೆ ಹೋಗಿ, ಮಾಟ ಮಂತ್ರ ಮಾಡಿ,ನನ್ನ ಮೈಯಲ್ಲಿ ದೇವರು ಬಂದಿದ್ದಾನೆ,ನಿನ್ನ ಗಂಡನ ಹೆಸರಿನಲ್ಲಿ ಆಸ್ತಿ ಇದ್ದರೆ ನಿಮಗೆ ಕಂಟಕ ಕಾದಿದೆ ಎಂದು ಹೆದರಿಸಿ ಮಂತ್ರವಾದಿ ವಾಲಿ,ಕೆ. ಕಲ್ಯಾಣ ಅವರಿಗೆ ಸೇರಿದ ಬರೊಬ್ಬರಿ ಆರು ಕೋಟಿ ಆಸ್ತಿಯನ್ನು ಖಾಲಿ ಮಾಡಿರುವ ವಿಷಯವನ್ನು ಪತ್ತೆ ಹಚ್ವು ವಲ್ಲಿ ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಪ್ರೇಮಕವಿ ಕೆ.ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿಸಿದ ಆರೋಪಿ ಶಿವಾನಂದ ವಾಲಿಯಿಂದ 6 ಕೋಟಿ ಮೌಲ್ಯದ ಆಸ್ತಿಯನ್ನು ಬೆಳಗಾವಿ ಪೋಲೀಸರು ಜಪ್ತಿ ಮಾಡಿಕೊಂಡಿದ್ದಾರೆ.ಆರೋಪಿ ಶಿವಾನಂದ ವಾಲಿ ತನ್ನ ಮೈಯಲ್ಲಿ ದೇವರು ಬರುತ್ತೆ ಎಂದು ನಂಬಿಸಿ ಕಲ್ಯಾಣ ಪತ್ನಿ ಅತ್ತೆ ಮಾವಗೆ ಮೋಸ ಮಾಡಿದ್ದಾನೆ ಎಂದು ಬೆಳಗಾವಿ ಡಿಸಿಪಿ ಡಾ. ಅಮಟೆ ಹೇಳಿದ್ದಾರೆ.ಇಂದು ಪತ್ರಿಕಾಗೋಷ್ಢಿ ನಡೆಸಿ ಮಾತನಾಡಿದ ಅವರು, ಸೆ.30 ರಂದು ಕೆ.ಕಲ್ಯಾಣ ಮಹಾಳಮಾರುತಿ ಠಾಣೆಯಲ್ಲಿ ಕಿಡ್ನಾಪ ಮತ್ತು ವಂಚನೆ ಕೇಸ್ ನೀಡಿದ್ದರು. ಅದರಂತೆ ಕೆ.ಕಲ್ಯಾಣ ಅವರ ಪತ್ನಿ ಅಶ್ವಿನಿ, ಅತ್ತೆ ಮಾವ ಅವರನ್ನು ರಕ್ಷಣೆ ಮಾಡಿ, ವಿಚಾರಣೆ ಮಾಡಲಾಯಿತು. ಪ್ರಕರಣ ಆರೋಪಿ ಶಿವಾನಂದ ವಾಲಿಯನ್ನ ಅರೇಸ್ಟ್ ಮಾಡಲಾಗಿತ್ತು. ಆರು ದಿನಗಳ ಕಾಲ ವಾಲಿಯನ್ನ ಕಸ್ಟಡಿ ಪಡೆದು ತನಿಖೆ ನಡೆಸಲಾಯಿತು.ಆರೋಪಿಯಿಂದ 9 ಮ್ಯಾಕ್ಸಿ ಕ್ಯಾಬ್, 350 ಗ್ರಾಮ ಚಿನ್ನ, 6 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿಯಲ್ಲಿನ 6 ಪ್ರಾಪರ್ಟಿಗಳಲ್ಲಿ, ಅಂದ್ರೆ ಎರಡನ್ನ ಶಿವಾನಂದ ವಾಲಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾನೆ. ಉಳಿದ ನಾಲ್ಕು ಪ್ರಾಪರ್ಟಿಗಳ ಜಿಪಿ ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆ.ಇವೇಲ್ಲವೂ ಅತ್ತೆ ಮಾವ ಹೆಸರಿನಲ್ಲಿದ್ದಮನೆ, ಸೈಟ್, ಲ್ಯಾಂಡಗಳನ್ನ ಬರೆಸಿಕೊಂಡಿದ್ದಾನೆ. ಅಂದಾಜು 6 ಕೋಟಿ ಮೌಲ್ಯದ ಆಸ್ತಿ ಬರೆಸಿಕೊಂಡಿದ್ದಾನೆ.ಎಂದು ಡಿಸಿಪಿ ಅಮಟೆ ತಿಳಿಸಿದ್ದಾರೆ.
ಕೆ.ಕಲ್ಯಾಣ ಪತ್ನಿ, ಅತ್ತೆ ಮಾವ ಅವರಿಗೆ ಜೀವಕ್ಕೆ ಆಪತ್ತಿದೆ ಎಂದು ಹೆದರಿಸಿ ಹಣ, ಆಸ್ತಿ ಬರೆಸಿಕೊಂಡಿದ್ದಾನೆ.ಆರೋಪಿ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಪ್ರತಿಬಂಧಕ ಅಧಿನಿಯಮ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. ಶಿವಾನಂದ ವಾಲಿ ಮತ್ತು ಗಂಗಾ ಕುಲಕರ್ಣಿ ಪ್ರಮುಖ ಆರೋಪಿಗಳು. ಗಂಗಾ ಕುಲಕರ್ಣಿ ಬಂಧನಕ್ಕೆ ತಂಡ ರಚಿಸಲಾಗಿದೆ. ಇಬ್ಬರೂ ಆರೋಪಿಗಳು ಕಲ್ಯಾಣ ದಾಂಪತ್ಯದಲ್ಲಿ ಮೊದಲು ಬಿರುಕು ಮೊಡುವಂತೆ ಮಾಡಿದ್ದಾರೆ. ಆ ಬಳಿಕ ನಿಮ್ಮ ಹೆಸರಿನಲ್ಲಿ ಆಸ್ತಿ ಇದ್ದರೆ ಪ್ರಾಣಕ್ಕೆ ಸಂಚಾಕರ ಬರಲಿದೆ ಎಂದು ಹೆದರಿಸಿದ್ದಾರೆ. ಅವರಿಂದ ಪೂಜೆ ಮಾಡಲು ಹಣ, ಆಸ್ತಿಯನ್ನ ಪಡೆದುಕೊಂಡಿದ್ದಾನೆ. ಕಲ್ಯಾಣ ಪತ್ನಿ ಅಶ್ವಿನಿ, ಅವರ ಅತ್ತೆ ಮಾವ ಅವರ ಸಂಬಂಧಿಕರ ಮನೆಯಲ್ಲಿ ಇದ್ದಾರೆ. ಕಲ್ಯಾಣ ಪತ್ನಿ ಅವರ ಕುಟುಂಬ ತನಿಖೆ ಸಹಕರಿಸಿದ್ದಾರೆ. ಕೌನ್ಸಲಿಂಗ್ ಇಂದ ಕಲ್ಯಾಣ ಪತ್ನಿ ಅಶ್ವಿನಿ ಅವರಿಗೆ ಅವರು ಮೋಸ್ ಹೋಗಿದ್ದು ಮನವರಿಕೆ ಆಗಿದೆ. ಮುಂದಿನಗಳಲ್ಲಿ ಅವರ ದಾಂಪತ್ಯ ಜೀವನ ಸರಿಯಾಗಲಿದೆ. ಇಂದು ಆರೋಪಿ ಶಿವಾನಂದ ವಾಲಿಯನ್ನ ಕೋರ್ಟಗೆ ಹಾಜರು ಪಡಿಸಲಿದ್ದಾರೆ ಎಂದು ಡಿಸಿಪಿ ಡಾ.ವಿಕ್ರಮ್ ಅಮಟೆ ಹೇಳಿದ್ದಾರೆ.