ಬೆಳಗಾವಿ-ಬೈಕ್ ಮೇಲೆ ಬಂದ ಭಗ್ನ ಪ್ರೇಮಿಯೊಬ್ಬ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ಸೆಕ್ಯೂರಿಟಿ ಗಾರ್ಡ್ ಮೇಲೆ ತಲವಾರ್ ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಮಾರಕಾಸ್ತ್ರಗಳಿಂದ ಕೊಚ್ಚಿ ಸುಧಾರಾಣಿ ಹಡಪದ(30) ಎಂಬ ಮಹಿಳೆಯ ಹತ್ಯೆ ಮಾಡಲಾಗಿದ್ದು ಈ ಮಹಿಳೆ,ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಸಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದ್ದು.ಜಿಲ್ಲಾಸ್ಪತ್ರೆ ಆವರಣದಲ್ಲೇ ತಲವಾರ್‌ನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಠಾಣೆ ಪೊಲೀಸರು.ಆರೋಪಿಯನ್ನು ವಶಕ್ಕೆ ಪಡೆದು ಕರೆದೊಯ್ದ ಎಪಿಎಂಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಬೆಳ್ಳಂ ಬೆಳಿಗ್ಗೆ ಜನರ ಆತಂಕಕ್ಕೆ ಕಾರಣವಾಗಿದೆ.
ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಮಹಿಳೆ ಕೊಲೆ ಪ್ರಕರಣಕ್ಕೆ ಸಮಂಧಿಸಿದಂತೆ ಆರೋಪಿ ಬಾಬು ಜಗಜಂಪಿಯನ್ನು ವಶಕ್ಕೆ ಪಡೆದ ಪೊಲೀಸರು ಕೊಲೆಗೆ ಕಾರಣ ಏನು ಎಂಬುವದನ್ನು ವಿಚಾರಣೆ ನಡೆಸಿದ್ದಾರೆ.
ಮೃತ ಸುಧಾ ಹಡಪದ ಹಾಗೂ ಆರೋಪಿ ನಡುವೆ ಮದುವೆ ಮಾತುಕತೆ ನಡೆದಿತ್ತು,
ನಂತರ ಬಾಬು ಬಿಟ್ಟು ಬೇರೆಯೊಬ್ಬನ ಜತೆಗೆ ಸುಧಾರಾಣಿ ಓಡಾಟ ಮಾಡುತ್ತಿದ್ದಳು ಇದರಿಂದ ಕೋಪಗೊಂಡ ಬಾಬು ಜಗಜಂಪಿ ಸುಧಾರಾಣಿಯನ್ನು ಕೊಲೆ ಮಾಡಿದ್ದಾನೆ. ಆರೋಪಿ ನಾನು ಸುಧಾಳನ್ನು ಮದುವೆ ಆಗಿದ್ದಾಗಿ ಹೇಳಿದ್ದು ಆರೋಪಿ ಸುಧಾರಾಣಿಯ ಜೊತೆ ಹಣಕಾಸಿ ವ್ಯವಹಾರ ಕೂಡಾ ಮಾಡಿದ್ದ ಎಂದು ತಿಳಿದು ಬಂದಿದೆ
ತನ್ನ ಜೊತೆ ಮದುವೆಯೂ ಆಗದೇ,ತಾನು ಕೊಟ್ಟ ಹಣವನ್ನೂ ಕೊಡದೇ ಸುಧಾರಾಣಿ ಬೇರೆ ವ್ಯೆಕ್ತಿಯ ಜೊತೆ ಓಡಾಡಿಕೊಂಡಿದ್ದಕ್ಕೆ ಬಾಬು ಸುಧಾರಾಣಿಯ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ