ಬೆಳಗಾವಿ-ಬೆಳಗಿನ ಜಾವ ಮನೆಯ ಕಿಟಕಿ ಮುರಿದು ಮನೆಗೆ ನುಗ್ಗಿದ ದರೋಡೆಕೋರರುಮನೆಯಲ್ಲಿದ್ದ ದಂಪತಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿದ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ.
ಟಿಳಕವಾಡಿಯ ಮೂರನೇಯ ಗೇಟ್ ಬಳಿ ರಾಣಾ ಪ್ರತಾಪರಾವ್ ರಸ್ತೆಯಲ್ಲಿರುವ ಅಭಿಜೀತ್ ಸಾಮಂತ ಅವರಿಗೆ ಸೇರಿದ ಮನೆಯಲ್ಲಿ ರಾತ್ರಿ ಮೂರು ಗಂಟೆಗೆ ಈ ದರೋಡೆ ನಡೆದಿದೆ.
ಮನೆಯ ಕಿಟಕಿ ಮುರಿದು ಮನೆಗೆ ನುಗ್ಗಿರುವ 7ಜನ ದರೋಡೆಕೋರರು, ಮನೆಯಲ್ಲಿನ ಟ್ರೇಝರಿಯಲ್ಲಿನ ಬಟ್ಟೆಗಳನ್ನು ಚಿಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ ಮನೆಯಲ್ಲಿ ಮಲಗಿದ್ದ ದಂಪತಿ ಎಚ್ಚರವಾಗಿದ್ದಾರೆ.
7 ಜನ ದರೋಡೆಕೋರರು ಚಾಕು ತೋರಿಸಿ,ನಾವು ನಿಮಗೆ ಏನೂ ಮಾಡುವದಿಲ್ಲ,ನಮಗೆ ಬಂಗಾರ ಮತ್ತು ಹಣ ಕೊಡಿ ಎಂದು ಬೆದರಿಸಿದ್ದಾರೆ.
ಅಭಿಜೀತ್ ಸಾಮಂತ್ ಅವರ ಪತ್ನಿ ಮಂಗಳಸೂತ್ರ ಸೇರಿದಂತೆ ಒಟ್ಟು 30 ಗ್ರಾಮ ತೂಕದ ಚಿನ್ನಾಭರಣ ನೀಡಿದ ಬಳಿಕ ದರೋಡೆಕೋರರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಉದ್ಯಮಬಾಗ ಪೋಲೀಸರು ದೌಡಾಯಿಸಿದ್ದು ಪಿಐ ದಯಾನಂದ ಶೇಗುಣಸಿ ತನಿಖೆ ಆರಂಭಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ