Breaking News

ಆಸ್ತಿಗಾಗಿ ತಂದೆಯನ್ನೇ ಮರ್ಡರ್ ಮಾಡಿದ ಕಿರಾತಕ ಮಗ..!

ಬೆಳಗಾವಿ- ಆಸ್ತಿಗಾಗಿ,ದುಡ್ಡಿಗಾಗಿ ತಂದೆಯನ್ನೇ ಮಗನೊಬ್ಬ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಮೂರು ದಿನಗಳ ಹಿಂದೆ ಈ ಘಟನೆ ನಡೆದಿತ್ತು,ಮಗ ಮಾಡಿದ ಹಲ್ಲೆಯಿಂದ ತಂದೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು,ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣಾ ಹದ್ದಿಯ ಪಾಟೀಲ ಮಾಳಾದಲ್ಲಿ ವಾಸವಿರುವ ಲಕ್ಷ್ಮಣ ಲಕ್ಕಪ್ಪ ಶಿರೂರ, ವಯಾ-50 ವರ್ಷ ಇವರ ಮಗ ಆರೋಪಿ ಸೋಮನಾಥ ಲಕ್ಷ್ಮಣ ಶಿರೂರ, ಸಾ-ಕೊತ್ವಾಲ್ ಗಲ್ಲಿ, ಬೆಳಗಾವಿ ಇವನು ತನ್ನ ತಂದೆಯ ಮನೆಗೆ ಬಂದು ನನಗೆ ಹಣ ಕೊಡು ಆಸ್ತಿಯಲ್ಲಿ ಪಾಲು ಕೊಡು ಅಂತಾ ಅಂದು ತಂಟೆ ತಕರಾರು ಮಾಡುತ್ತಿದ್ದ ಈ ವಿಚಾರವಾಗಿ ದಿನಾಂಕ 4-3-2021 ರಂದು ಸಂಜೆ 4-30 ಗಂಟೆಯ ಸುಮಾರಿಗೆ ತನ್ನ ತಂದೆಯ ಮನೆಯ ಬಳಿ ಬಂದು ಆಸ್ತಿ ಕೊಡು ಅಂತಾ ತಂಟೆ ಮಾಡಿ ತನ್ನ ಬಳಿ ಇದ್ದ ಚಾಕುವಿನಿಂದ ತನ್ನ ತಂದೆಯ ಎದೆಯ ಕೆಳ ಬಾಜು ಇರಿದು ಕೊಲೆ ಮಾಡಿದ್ದಾನೆ.

ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕಾರ್ಯ ಪ್ರವೃತ್ತರಾದ ಖಡೇಬಜಾರ ಪೊಲೀಸ್ ಠಾಣೆಯ ಪೋಲಿಸ್ ಇನ್ಸ್‌ಪೆಕ್ಟರ್ ಡಿ ಬಿ ಶಿಂಧೆ ಹಾಗೂ ಅವರ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿ ಸೋಮನಾಥ ಲಕ್ಷ್ಮಣ ಶಿರೂರ, ಸಾ-ಕೊತ್ವಾಲ್ ಗಲ್ಲಿ, ಬೆಳಗಾವಿ ಇವನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡೆಸಿದ್ದು ಪ್ರಕರಣ ತನಿಖೆಯಲ್ಲಿ ಇರುತ್ತದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *