Breaking News
Home / Breaking News / ಬೆಳಗಾವಿಯಲ್ಲಿ 6.675 ಟನ್ ಸ್ಪೋಟಕ ಪತ್ತೆ

ಬೆಳಗಾವಿಯಲ್ಲಿ 6.675 ಟನ್ ಸ್ಪೋಟಕ ಪತ್ತೆ

ಬೆಳಗಾವಿ-ನಿಯಮಗಳನ್ನು ಉಲಂಘಿಸಿ ನಿರ್ಲಕ್ಷ್ಯತನ ಹಾಗೂ ಮಾನವ ಪ್ರಾಣಕ್ಕೆ ಅಪಾಯವಾಗುವತೆ ಸಾಗಿಸುತ್ತಿದ ಅಂದಾಜು ಸುಮಾರು 4 ಲಕ್ಷ ಮೌಲ್ಯದ 6.675 ಟನ್ ಬಾರಿ ಸ್ಪೋಟಕ ವಸ್ತುಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಕಾಕತಿ ಪೊಲೀಸ್ ನಿರೀಕ್ಷಕರು ಹಳ್ಳೂರ ರವರ ನೇತ್ರತ್ವದ ತಂಡವು ಸ್ಪೋಟಕ ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯ ವಾಗಿ ಹಾಗೂ ಮಾನವ ಪ್ರಾಣಕ್ಕೆ ಅಪಾಯವಾಗುವಂತೆ ಸಾಗಿಸುತ್ತಿದ್ದ ಅಂದಾಜು 4 ಲಕ್ಷ ಮೌಲ್ಯದ 6.675 ಟನ್ ಸ್ಪೋಟಕ ವಸ್ತುಗಳನ್ನು ಹೊನಗಾ ಗ್ರಾಮದ ಸ್ಪೂರ್ತಿ ದಾಬಾದ ಎದುರುಗಡೆ ಟಾಟಾ ಕ್ಯಾಂಟರ್ ನಂಬರ್‌ ಕೆಎ 23 ಬಿ 2509 ಮತ್ತು ಬೋಲೆರೊ ಪಿಕ್ ಅಪ್ ನಂಬರ್ ಕೆಎ 23 ಎ 8909 ವಾಹನಗಳನ್ನು ಸ್ಪೋಟಕ ವಸ್ತುಗಳೊಂದಿಗೆ ವಶಕ್ಕೆಪಡೆದಿದ್ದಾರೆ.

3 ಆರೋಪಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಕಾಕತಿ ಪೊಲೀಸ್ ಠಾಣೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿರುತ್ತದೆ.

ಆರೋಪಿತರ ವಿವರ:
1) ರಮೇಶ ರಾಯಪ್ಪ ಲಕ್ಕೊಟಿ ಸಾ|| ಬೊಬಲವಾಡ ತಾ|| ಚಿಕ್ಕೊಡಿ
2) ರಾಜು ಈಶ್ವರ ಶಿರಗಾಂವಿ ಸಾ||ಬೊಬಲವಾಡ ತಾ||ಚಿಕ್ಕೊಡಿ
3) ಅರುಣ ಶ್ರೀಶೈಲ ಮಠ್ಠದ ಸಾ|| ಮುಗಳಿ
4) ತಾ|| ಚಿಕ್ಕೊಡಿ ಹಾಗೂ ಸ್ಪೋಟಕ ವಸ್ತುಗಳ ಮ್ಯಾಗಜೀನ್ ಹೋಲ್ಡರ್ ವಿನಯ ಟ್ರೆಡರ್ಸನ ವಿನಯ ಸುಭಾಷ್ ಕಿನ್ನವರ ಸಾ|| ಚಿಕ್ಕೊಡಿ.

ವಶಕ್ಕೆ ಪಡೆದ ಸ್ಪೋಟಕ ವಸ್ತುಗಳನ್ನು ಕಾಕತಿ ವ್ಯಾಪ್ತಿಯ ನಿಂಗ್ಯಾನಟ್ಟಿಯ ಸ್ಪೋಟಕ ಮ್ಯಾಗಜೀನ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *