ಬೆಳಗಾವಿ- ನಗರ ಪೋಲೀಸ್ ಆಯುಕ್ತ ಬೋರಲಿಂಗಯ್ಯ ಕೊನೆಗೂ ಮಟಕಾ ಜೂಜಾಟದ ವಿರುದ್ಧ ಕಾರ್ಯಾಚರಣೆ ಶುರು ಮಾಡಿದ್ದು ,ಮಟಕಾ ಬುಕ್ಕಿಗಳಿಗೆ ಸಹಕಾರ ನೀಡುತ್ತಿದ್ದ ಇಬ್ಬರನ್ನು ಅಮಾನತು ಮಾಡುವ ಮೂಲಕ ಇತರ ಪೋಲೀಸ್ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಮಟಕಾ ಬುಕ್ಕಿಯಿಂದ ಒಂದು ಲಕ್ಷ ರೂ. ಲಂಚ ಪಡೆದಿದ್ದ ಎಎಸ್‌ಐ ಹಾಗೂ ಹೆಡ್ ಕಾನ್ಸಟೇಬಲ್ ಅವರನ್ನು ಅಮಾನತು ಮಾಡಿ ಪೊಲೀಸ್ ಕಮೀಷನರ್ ಡಾ. ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.
ಖಡೇಬಜಾರ್ ಠಾಣೆ ಎಎಸ್‌ಐ ಹತ್ತಿಕಟ್ಟಿ ಹಾಗೂ ಎಸಿಪಿ ಕ್ರೆöÊಂ ವಿಭಾಗದ ಹೆಡ್ ಕಾನ್ಸಟೇಬಲ್ ಶಂಕರ ಪಾಟೀಲ ಅವರನ್ನು ವಿಚಾರಣೆ ನಡೆಸಿ ಪೊಲೀಸ್ ಆಯುಕ್ತರು ಅಮಾನತುಗೊಳಿಸಿದ್ದಾರೆ.
ನಗರದಲ್ಲಿ ಅವ್ಯಾಹತವಾಗಿ ಮಟಕಾ, ಜೂಜಾಟ ನಡೆಯುತ್ತಿದ್ದು, ಮಟಕಾ ಆಡುವವರಿಗೆ ಎಎಸ್‌ಐ ಹತ್ತಿಕಟ್ಟಿ ಹಾಗೂ ಪೊಲೀಸ್ ಪೇದೆ ಶಂಕರ ಪಾಟೀಲ ಸಹಕಾರ ನೀಡುತ್ತಿದ್ದರು. ಸೋಮವಾರ ಮಟಕಾ, ಓಸಿ ಬುಕ್ಕಿಯಿಂದ ಈ ಇಬ್ಬರೂ ಸೇರಿ ಲಕ್ಷ ರೂ. ಲಂಚ ಪಡೆದಿದ್ದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸ್ ಕಮೀಷನರ್ ಬೋರಲಿಂಗಯ್ಯ ಅವರು, ಇಬ್ಬರನ್ನೂ ಕರೆಯಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಈ ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ. ಎಂದು ತಿಳಿದು ಬಂದಿದೆ.