Breaking News

ಹಣ ವಾಪಸ್ ಕೇಳಿದ್ದಕ್ಕೆ ಮಗನ ಜೊತೆ ಸೇರಿ, ಮಿಂಡನ ಮಟ್ಯಾಶ್…..!!!

ಕೊಲೆಯಾದ ವ್ಯೆಕ್ತಿ

ಹಂತಕಿಯ ಚಿತ್ರಗಳು

ಬೆಳಗಾವಿ- ಒಂದು ವಾರದ ಹಿಂದೆ ಬೆಳಗಾವಿ ಸಮೀಪದ ಬೆಳಗುಂದಿ ಗ್ರಾಮದಲ್ಲಿ ವ್ಯೆಕ್ತಿಯೊಬ್ಬನ ಹತ್ಯೆಯಾಗಿತ್ತು.ಈ ಹತ್ಯೆಯ ಕಹಾನಿ ಕೇಳಿದ್ರೆ ಎದೆ ಝಲ್ ಅಂತೈತಿ,ಇಬ್ಬರ ಜೊತೆ ಮದುವೆಯಾಗಿ,ಇಬ್ಬರ ಜೊತೆಯೂ ಜಗಳಾಡಿ,ಮೂರನೇಯ ಲೇಡಿಜೊತೆ ಲವ್ ಮಾಡಿದಾತ,ಮೂರನೇಯ ಲವ್ಬಿ ಡವ್ಹಿಗೆ ಬಲಿಯಾದ ಕರಾಳ ಕಹಾನಿ ಬೆಳಕಿಗೆ ಬಂದಿದೆ.

ಕೊಲೆಯಾದ ವ್ಯೆಕ್ತಿ, ಹುಟ್ಟುರೂ ಬಿಟ್ಟು ಪಕ್ಕದ ಊರಿಗೆ ಬಂದು ಬೇಕರಿ ತಗೆದು ಜೀವನ ಸಾಗಿಸುತ್ತಿದ್ದ. ಎರಡು ಮದುವೆಯಾಗಿದ್ದ ಈತನ ಇಬ್ಬರೂ ಹೆಂಡತಿಯರು ಬಿಟ್ಟು ಹೋಗಿದ್ರು. ಎರಡನೇ ಪತ್ನಿಯ ಮಗನ ಜೊತೆ ವಾಸವಿದ್ದ ಈತನ ಜೊತೆ ವಿಧವೆಯೊಬ್ಬಳು ಸೇರಿ ಬೇಕರಿಯಲ್ಲಿ ಕೆಲಸ ಮಾಡ್ತಾ ಈತನ ಜತೆಯೇ ತನ್ನ ಇಬ್ಬರು ಮಕ್ಕಳ ಜೊತೆ ವಾಸವಿದ್ದಳು. ವ್ಯವಹಾರದಲ್ಲಿ ನಷ್ಟವಾಗಿ ಬೇಕರಿ ಬಂದ್ ಆದ ಬಳಿಕ ನಡೆದಿದ್ದೇ ಬೇರೆ,ವಿಧವೆಗೆ ಬಾಳು ನೀಡಿ ಮನೆ ಕಟ್ಟಿಸಿ ಕೊಟ್ಟಾತ ಕೊಲೆಯಾಗಿ ಹೋದ.
ಇಬ್ಬರು ಹೆಂಡಿರು ಬಿಟ್ಟು ಹೋದ ಬಳಿಕ ಬೇಕರಿಯಲ್ಲಿ ಕೆಲಸಕ್ಕೆ ಬಂದವಳ ಜೊತೆ ಲವ್ ಮಾಡಿ,ರೆಜಿಸ್ಟರ್ ಮದುವೆ ಆಗಿದ್ದ, ಬೇಕರಿಯಲ್ಲಿ ಫುಲ್ ಲಾಸ್ ಆದನಂತರ ಮೂರನೇಯ ಲವರ್ ಹತ್ತಿರ ಹಣ,ಮನೆ,ವಾಪಸ್ ಕೊಡು ಅಂದಿದ್ದಕ್ಕೆ ಕತ್ತು ಸೀಳಿದ್ಲು ಹಂತಕಿ ಅನ್ನೋ ವಿಚಾರ ಈಗ ಬಯಲಾಗಿದೆ.

ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ಫೆಬ್ರವರಿ 27ರಂದು ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಅವನದ್ದೇ ಮನೆಯಲ್ಲಿ ಪತ್ತೆಯಾಗಿತ್ತು. ಬೆಳಗುಂದಿಯಲ್ಲಿ ಕಳೆದ 15 ವರ್ಷಗಳಿಂದ ಬೇಕರಿ ನಡೆಸುತ್ತಿದ್ದ ಬಸೂರ್ತೆ ಗ್ರಾಮದ ಗಜಾನನ ನಾಯ್ಕ್‌ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಮಹಿಳೆ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗುಂದಿ ಗ್ರಾಮದ ವಿದ್ಯಾ ಪಾಟೀಲ್ ಆಕೆಯ ಮಗ ಹೃತಿಕ್ ಪಾಟೀಲ್ ಹಾಗೂ ಹೃತಿಕ್ ಸ್ನೇಹಿತ ಪರಶುರಾಮ ಗೋಂಧಳಿ ಬಂಧಿತ ಆರೋಪಿಗಳು. ಅಸಲಿಗೆ ಪ್ರಮುಖ ಆರೋಪಿ ವಿದ್ಯಾ ಪಾಟೀಲ್ ಹಾಗೂ ಗಜಾನನ ನಾಯ್ಕ್ ಮಧ್ಯೆ ಇದ್ದ ಸಂಬಂಧ ಏನು ಅಂತಾ ನೋಡೋದಾದ್ರೆ, ಎರಡು ಮದುವೆಯಾಗಿದ್ದ ಗಜಾನನ ನಾಯ್ಕ್ ಇಬ್ಬರು ಪತ್ನಿಯರು ಬಿಟ್ಟು ಹೋಗಿದ್ರು. ಎರಡನೇ ಪತ್ನಿಯ ಮಗನ‌ ಜೊತೆ ವಾಸವಿಸದ್ದ ಗಜಾನನ ನಾಯ್ಕ್ ಮಗನನ್ನು ಚೆನ್ನಾಗಿ ಓದಿಸಿ ಬೆಳಗಾವಿಯ ಖಾಸಗಿ ಕಾಲೇಜಿಗೆ ಸೇರಿಸಿದ್ದ. ಬೆಳಗುಂದಿಯಲ್ಲಿ ಬೇಕರಿ ನಡೆಸುತ್ತಿದ್ದ ಗಜಾನನ ನಾಯ್ಕ್‌ಗೆ ಅದೇ ಗ್ರಾಮದ ವಿಧವೆ ವಿದ್ಯಾ ಪಾಟೀಲ್ ಎಂಬಾಕೆ ಪರಿಚಯವಾಗಿ ಇಬ್ಬರು ಸೇರಿ ಬೇಕರಿ ನಡೆಸುತ್ರಿರ್ತಾರೆ. ವಿಧವೆಯಾಗಿದ್ದ ವಿದ್ಯಾ ಪಾಟೀಲ್ ತನ್ನ ಇಬ್ಬರು ಮಕ್ಕಳ ಜೊತೆ ಬೇಕರಿಯಲ್ಲೇ ವಾಸವಿರ್ತಾಳೆ‌. ಆದ್ರೆ ಕಳೆದ ಮೂರು ವರ್ಷಗಳ ಹಿಂದೆ ವ್ಯವಹಾರದಲ್ಲಿ ನಷ್ಟವಾಗಿ ಬೇಕರಿ ಬಂದ್ ಮಾಡಿರ್ತಾರೆ. ಹೀಗೆ ಬೇಕರಿ ಬಂದ್ ಆದ ಬಳಿಕ ವಿದ್ಯಾ ಪಾಟೀಲ್ ಗೋವಾಗೆ ತೆರಳಿದ್ರೆ ಗಜಾನನ ನಾಯ್ಕ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಜೀವನ ಸಾಗಿಸುತ್ತಿರುತ್ತಾನೆ

ಹೀಗೆ ವಿದ್ಯಾ ಪಾಟೀಲ್ ಜೊತೆಗೂಡಿ ಬೇಕರಿ ನಡೆಸುತ್ತಿದ್ದ ಗಜಾನನ ನಾಯ್ಕ್ ವಿದ್ಯಾ ಪಾಟೀಲ್ ಹೆಸರಲ್ಲಿ ಸಾಲ ಸೋಲ ಮಾಡಿ ಎರಡಂತಿಸ್ತಿನ ಮನೆಯೊಂದನ್ನು ಕಟ್ಟಿಸಿ ಕೊಟ್ಟಿರುತ್ತಾನೆ. ಅಷ್ಟೇ ಅಲ್ಲದೇ ವಿಧವೆಯಾಗಿದ್ದ ವಿದ್ಯಾ ಪಾಟೀಲ್ ಇಬ್ಬರ ಮಕ್ಕಳನ್ನು ತಾನೇ ಖರ್ಚು ಮಾಡಿ ಶಾಲೆಗೂ ಸೇರಿಸಿರ್ತಾನೆ. ಯಾವಾಗ ಬೇಕರಿ ಉದ್ಯಮದಲ್ಲಿ ನಷ್ಟವಾಗುತ್ತೋ ಆಗ ಸಾಲಗಾರರ ಕಾಟ ಶುರುವಾಗುತ್ತೆ. ಆಗ ವಿದ್ಯಾ ಪಾಟೀಲ್ ಹೆಸರಿನಲ್ಲಿದ್ದ ಮನೆ ಮೇಲೆ 15 ಲಕ್ಷ ರೂ. ಸಾಲ ತಗೆಸಿದ್ದರೂ ಸಾಲ ತೀರಲ್ಲ‌.‌ ಆಗ ಆ ಮನೆ ಮಾರಿ ತನಗೆ ದುಡ್ಡು ನೀಡುವಂತೆ ವಿದ್ಯಾ ಪಾಟೀಲ್ ಗೆ ಒತ್ತಾಯಿಸುತ್ತಿರುತ್ತಾನೆ.

ಇಲ್ಲವಾದ್ರೆ ನಿನ್ನ ಜೊತೆ ರೆಜಿಸ್ಟರ್ ಮದುವೆಯಾದ ಬಗ್ಗೆ ಎಲ್ಲರಿಗೂ ತಿಳಿಸುತ್ತೇನೆ ಅಂತಾ ಹೇಳಿರ್ತಾನೆ. ಇದರಿಂದ ಕಂಗಾಲಾದ ವಿದ್ಯಾ ಪಾಟೀಲ್ ಗಜಾನನ ನಾಯ್ಕ್ ಹತ್ಯೆಗೆ ಸ್ಕೆಚ್ ರೂಪಿಸುತ್ತಾಳೆ‌. ಅದರಂತೆ ಫೆಬ್ರವರಿ 26ರ ರಾತ್ರಿ ಸೇರೋಕೆ ಪ್ಲ್ಯಾನ್ ಮಾಡ್ತಾರೆ. ಬಹಳ ದಿನಗಳಿಂದ ನಾವು ಭೇಟಿಯಾಗಿಲ್ಲ ಇಂದು ರಾತ್ರಿ ನಿಮ್ಮ ಮನೆಯಲ್ಲೇ ಭೇಟಿಯಾಗೋಣ ಮಗನನ್ನು ಊರಿಗೆ ಕಳಿಸು ಅಂತಾ ಹೇಳಿರ್ತಾಳೆ‌. ಅದರಂತೆ ತನ್ನ ಮಗ ಅವಧೂತ್‌ನನ್ನು ಬಸೂರ್ತೆ ಗ್ರಾಮಕ್ಕೆ ಬಿಟ್ಟು ಬಂದಿರ್ತಾನೆ.

ಫೆಬ್ರವರಿ 26ರ ರಾತ್ರಿ ಗಜಾನನ ನಾಯ್ಕ್‌ ನಿವಾಸಕ್ಕೆ ಬಂದ ವಿದ್ಯಾ ಪಾಟೀಲ್ ಗಜಾನನಗೆ ಕಂಠಪೂರ್ತಿ ಮದ್ಯಪಾನ ಮಾಡಿಸ್ತಾಳೆ. ಬಳಿಕ ಮಧ್ಯರಾತ್ರಿ 12.30ರ ಸುಮಾರಿಗೆ ಮಗ ಹೃತಿಕ್ ಪಾಟೀಲ್ ಹಾಗೂ ಆತನ ಸ್ನೇಹಿತ ಪರಶುರಾಮ ಗೋಂಧಳಿಯನ್ನು ಕರೆಸಿ ಮೊದಲು ವೇಲ್ ನಿಂದ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಬಳಿಕ ಹರಿತವಾದ ಆಯುಧದಿಂದ ಕತ್ತು ಸೀಳಿ ಬರ್ಬರಬಾಗಿ ಹತ್ಯೆ ಮಾಡಿ ಗಜಾನನ ನಾಯ್ಕ್ ಡೈರಿ ಹಾಗೂ ಮೊಬೈಲ್ ಫೋನ್‌ನೊಂದಿಗೆ ಪರಾರಿಯಾಗಿರುತ್ತಾರೆ. ಮಾರನೇ ದಿನ ಮನೆಗೆ ಬಂದಿದ್ದ ಗಜಾನನ ಮಗ ಅವಧೂತ್ ತಂದೆ ಹತ್ಯೆಯಾಗಿದ್ದು ನೋಡ್ತಾನೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಗಜಾನನ ಮಗ ಅವಧೂತ್ ತನ್ನ ತಂದೆಯನ್ನು ವಿದ್ಯಾ ಪಾಟೀಲ್ ಹತ್ಯೆ ಮಾಡಿದ ಬಗ್ಗೆ ಸಂಶಯ ಇದೆ ಅಂತಾ ಹೇಳಿರ್ತಾನೆ. ಮಾರನೇಯ ದಿನ ಬೇರೆ ಊರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ವಿದ್ಯಾ ಪಾಟೀಲ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗುತ್ತೆ.

ಅದೇನೇ ಇರಲಿ ವಿಧವೆಗೆ ಬಾಳು ನೀಡಿ ಆಕೆಯ ಮಕ್ಕಳಿಗೆ ಶಿಕ್ಷಣ ನೀಡಿ ಮನೆ ಕಟ್ಟಿಸಿಕೊಟ್ಟಿದ್ದವನನ್ನೆ ಹತ್ಯೆ ಮಾಡಿದ ಹಂತಕಿಗೆ ಕಠಿಣ ಶಿಕ್ಷೆಯಾಗಲಿ ಎಂಬುದು ಸಾರ್ವಜನಿಕರ ಆಗ್ರಹ.‌ ಆದ್ರೆ ಇತ್ತ ಅಪ್ಪ ಕೊಲೆಯಾಗಿದ್ದು ಅಮ್ಮನೂ ಬಿಟ್ಟು ಹೋಗಿ ಮಗ ಮಾತ್ರ ಅನಾಥನಾಗಿದ್ದು ದುರಂತ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *