ಬೆಳಗಾವಿ- ಬೆಳಗಾವಿ ಜಿಲ್ಲೆಯ ತೆರೆದ ಬಾವಿಗಳ ಸಮೀಕ್ಷೆ ನಡೆಸಲು ಗ್ರಾಮ ಮಟ್ಟದ ತಂಡಗಳನ್ನು ರಚಿಸಲಾಗಿದ್ದು ಮೇ 15 ರೊಳಗಾಗಿ ಜಿಲ್ಲೆಯ ತೆರೆದ ಬಾವಿಗಳನ್ನು ಮುಚ್ಚುವ ಸಂಕಲ್ಪ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಯರಾಂ ತಿಳಿಸಿದರು
ಝಂಜರವಾಡ ಗ್ರಾಮದಲ್ಲಿ ನಡೆದ ದುರ್ಘಟನೆ ನಡೆದ ಬಳಿಕ ಜಿಲ್ಲೆಯ ಹತ್ತು ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಲಾಗಿದ್ದು ಗ್ರಾಮ ಪಂಚಾಯತಿ ಅಧ್ಯಕ್ರರ ನೇತ್ರತ್ವದಲ್ಲಿ ತಂಡ ರಚಿಸಿ ಜಿಲ್ಲೆಯ 503 ಗ್ರಾಮ ಪಂಚಾಯತಿ ಗಳಲ್ಲಿ ತಾಲೂಕಾ ಮಟ್ಟದ ಒಬ್ಬ ಅಧಿಕಾರಿಯನ್ನು ಪ್ರತಿಯೊಂದು ಗ್ರಾಮಕ್ಕೂ ನೇಮಿಸಲಾಗಿದೆ ಎಂದು ಡಿಸಿ ತಿಳಿಸಿದರು
ತೆರೆದ ಬಾವಿಗಳನ್ನು ಮುಚ್ಚದೇ ಇರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಕೈಗೊಳ್ಳಲು ಹಲವಾರು ಮಾರ್ಗಸೂಚಿಗಳನ್ನು ರಚಿಸಲಾಗಿದೆ ತೆರೆದ ಬಾವಿಗಳನ್ನು ಮುಚ್ವದೇ ಇರುವ ಭೂ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿ ಎಚ್ಚರಿಕೆ ನೀಡಿದರು
ಈ ಹಿಂದೆ ಜಿಲ್ಲೆಯಲ್ಲಿ ತೆರೆದ ಬಾವಿಗಳನ್ನು ಮುಚ್ಚುವ ಅಭಿಯಾನ ನಡೆಸಿ ಜಿಲ್ಲೆಯಲ್ಲಿ 11,570 ತೆರೆದ ಬಾವಿಗಳನ್ನು ಮುಚ್ಚಲಾಗಿದೆ ಈ ಬಾರಿಯೂ ಹದಿನೈದು ದಿನಗಳ ಕಾಲ ಅಭಿಯಾನ ನಡೆಸಿ ಜಲ್ಲೆಯ ಎಲ್ಲ ತೆರೆದ ಬಾವಿಗಳನ್ನು ಮುಚ್ವಲು ನಿರ್ಧರಿಸಿದ್ದೇವೆ ಎಂದರು
ಜಿಲ್ಲೆಯು ಸಾರ್ವಜನಿಕರು ತೆರದ ಬಾವಿಗಳನ್ನು ಮುಚ್ಚುವ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ಮನವಿ ಮಾಡಿಕೊಂಡಿದ್ದಾರೆ