 ಬೆಳಗಾವಿ- ಜೂನ್ 30 ಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಸೇವೆಯಿಂದ ನಿವೃತ್ತಿಯಾಗಲಿದ್ದು,ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿಗೆ ಮುಂದಿನ ಜಿಲ್ಲಾಧಿಕಾರಿ ಯಾರು ? ಎನ್ನುವ ಚರ್ಚೆ ಈಗ ಶುರುವಾಗಿದೆ.
ಬೆಳಗಾವಿ- ಜೂನ್ 30 ಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಸೇವೆಯಿಂದ ನಿವೃತ್ತಿಯಾಗಲಿದ್ದು,ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿಗೆ ಮುಂದಿನ ಜಿಲ್ಲಾಧಿಕಾರಿ ಯಾರು ? ಎನ್ನುವ ಚರ್ಚೆ ಈಗ ಶುರುವಾಗಿದೆ.
ಈ ಕುರಿತು ಹಲವಾರು ಜನ ನಾಯಕರು ಹಲವರ ಹೆಸರುಗಳನ್ನು ಹೇಳುತ್ತಿದ್ದಾರೆ.ಕೆಲವರು ಗದಗ ಡಿಸಿ ಎಂ ಜಿ ಹಿರೇಮಠ ಅವರ ಹೆಸರು ಹೇಳಿದರೆ,ಇನ್ನು ಕೆಲವು ನಾಯಕರು ರಾಜೇಂದ್ರ ಚೋಳನ್ ಅಥವಾ,ರಾಮಚಂದ್ರನ್ ಅವರ ಹೆಸರು ಹೇಳುತ್ತಿದ್ದಾರೆ.
ಎಂ ಜಿ ಹಿರೇಮಠ,ರಾಜೇಂದ್ರ ಚೋಳನ್,ದೀಪಾ ಚೋಳನ್,ರಾಮಚಂದ್ರನ್,ಮತ್ತು ಬೆಳಗಾವಿ ಜಿಪಂ ಸಿಇಓ ರಾಜೇಂದ್ರ ಅವರಲ್ಲಿ ಯಾರಾದ್ರೂ ಒಬ್ಬರು ಬೆಳಗಾವಿ ಜಿಲ್ಲೆಯ ಮುಂದಿನ ಡಿಸಿ ಆಗಬಹುದು ಎಂದು ಹೇಳುತ್ತಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈ ಕುರಿತು ಬೆಳಗಾವಿ ಜಿಕ್ಲೆಯ ಎಲ್ಲ ಮಂತ್ರಿಗಳ ಅಭಿಪ್ರಾಯ ಆಲಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಮೆಲ್ಕಾಣಿಸಿದ ಅಧಿಕಾರಿಗಳ ಹೆಸರು ಚಾಲ್ತಿಯಲ್ಲಿದ್ದು,ಇವರನ್ನು ಹೊರತು ಪಡಿಸಿ ಬೇರೆ ಹೆಸರು ತೇಲಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ,ಯಾಕಂದ್ರೆ ಈ ವಿಷಯದಲ್ಲಿ ಸಿಎಂ ನಿರ್ಧಾರವೇ ಅಂತಿಮ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ