ಕನ್ನಡ ಅನುಷ್ಠಾನಕ್ಕೆ ನಾಂದಿ ಹಾಡಿದ ಜಿಲ್ಲಾಧಿಕಾರಿ ಜಿಯಾವುಲ್ಲಾ
ಬೆಳಗಾವಿ- ಬೆಳಗಾವಿ ಜಿಲ್ಲಾಡಳಿತ ಕನ್ನಡ ಅನುಷ್ಢಾನ ಸಮೀತಿಯ ಸಭೆ ನಡೆಸಿ ಅದೆಷ್ಟೋ ವರ್ಷಗಳು ಗತಿಸಿವೆ ಗೊತ್ತಿಲ್ಲ ಬಹಳ ವರ್ಷಗಳ ನಂತರ ಡಿಸಿ ಜಿಯಾವುಲ್ಲಾ ಕನ್ನಡ ಅನುಷ್ಠಾನ ಸಮೀತಿಯ ಸಭೆ ನಡೆಸಿ ಬೆಳಗಾವಿ ಜಿಲ್ಲೆಯನ್ನು ಸಂಪೂರ್ಣವಾಗಿ ಕನ್ನಡಮಯ ವನ್ನಾಗಿಸಲು ಖಡಕ್ ಸೂಚನೆ ನೀಡಿದ್ದಾರೆ
ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಕನ್ನಡ ಹೋರಾಟಗಾರರ ಸಮ್ಮುಖದಲ್ಲಿ ಸಭೆ ನಡೆಸಿದ ಅವರು ಬೆಳಗಾವಿ,ನಿಪ್ಪಾಣಿ ಖಾನಾಪೂರ ಸೇರಿದಂತೆ ವಿವಿಧ ಪ್ರದೇಶದಲ್ಲಿ ಅಧಿಕಾರಿಗಳು ತಿಂಗಳಿಗೊಮ್ಮೆ ದಿಢೀರ್ ದಾಳಿ ನಡೆಸಿ ಕನ್ನಡ ನಾಮ ಫಲಕ ಜಾಹಿರಾತು ಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಕನ್ನಡ ಬಳಕೆ ಮಾಡದ ಅಂಗಡೀಕಾರರ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡು ಸರ್ಕಾರ ನಿಗದಿಪಡಿಸಿದ ದಂಡ ವಸೂಲಿ ಮಾಡಬೇಕೆಂದು ಅಧಿಕಾರಿಗಳಿಗೆ ಡಿಸಿ ಜಿಯಾವುಲ್ಲಾ ಖಡಕ್ ಎಚ್ಚರಿಕೆ ನೀಡಿದರು
ರಾಜ್ಯದ ಆಡಳಿತ ಭಾಷೆ ಕನ್ನಡ ಅಧಿಕಾರಿಗಳು ಕನ್ನಡ ಭಾಷೆಯಲ್ಲೇ ಸರ್ಕಾರಿ ವ್ಯವಹಾರಗಳನ್ನು ನಡೆಸಬೇಕು ಗ್ರಾಮ ಪಂಚಾಯತಿಗಳಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ಕನ್ನಡ ಅನುಷ್ಠಾನ ಕಡ್ಡಾಯವಾಗಬೇಕು ಗ್ರಾಮ ಪಂಚಾಯ್ತಿಗಳ ಠರಾವ್ ಗಳು ಸಭೆಯ ನಡುವಳಿಕೆಗಳು ಕನ್ನಡ ಭಾಷೆಯಲ್ಲೇ ಇರುವಂತೆ ಜಿಲ್ಲಾ ಪಂಚಾಯ್ತಿಯ ಅಧಿಕಾರಿಗಳು ನಿಗಾ ವಹಿಸಬೇಕು ಸಹಕಾರಿ ಬ್ಯಾಂಕುಗಳಲ್ಲಿ ಗಡಿ ಭಾಗದ ಗ್ರಾಮ ಪಂಚಾಯ್ತಿಗಳಲ್ಲಿ ಕನ್ನಡ ಭಾಷೆಯನ್ನು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ ಅನ್ನೋದರ ಬಗ್ಗೆ ಅಧಿಕಾರಿಗಳು ಪರಶೀಲನೆ ನಡೆಸಿ ವರದಿ ನೀಡಬೇಕು ಕನ್ನಡದ ನೆಲದಲ್ಲಿ ಕನ್ನಡವನ್ನೇ ಕೆಡಗಡಣಿಸಿದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವದು ಎಂದು ಡಿಸಿ ಜಿಯಾವುಲ್ಲಾ ಎಚ್ಚರಿಕೆ ನೀಡಿದರು
ಹಲವಾರು ವರ್ಷಗಳ ಬಳಿಕ ಬೆಳಗಾವಿ ಜಿಲ್ಲಾಡಳಿತ ಕನ್ನಡ ಅನುಷ್ಠಾನಕ್ಕೆ ಮುಂದಾಗಿರುವದು ಗಡಿನಾಡ ಕನ್ನಡಿಗರ ಪಾಲಿಗೆ ಈ ದಿನ ಕನ್ನಡದ ಹಬ್ಬವಾಗಿದೆ
ಕನ್ನಡದ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರಿಗೆ ಬೆಳಗಾವಿ ಸುದ್ಧಿಯ ಪರವಾಗಿ ಕನ್ನಡದ ಸಲಾಂ..!
ಹಿಂದಿನ ಜಿಲ್ಲಾಧಿಕಾರಿ ಜಯರಾಂ ಅವರ ಕನ್ನಡದ ಸೇವೆ ಮತ್ತು ಅವರು ಕೈಗೊಂಡ ನಿರ್ಧಾರಗಳನ್ನು ಗಡಿನಾಡು ಕನ್ನಡಿಗರು ಮರೆಯಲು ಸಾಧ್ಯವಿಲ್ಲ