ಬೆಳಗಾವಿ ನಗರದಲ್ಲಿ ಶ್ವಾನ ಪಾರ್ಕ್:
ಗೋಶಾಲೆಗಳ ಮಾದರಿಯಲ್ಲಿ ಶ್ವಾನ ಪಾರ್ಕ್ ಕೂಡ ಸ್ಥಾಪಿಸುವ ಯೋಜನೆ ರೂಪಿಸಲಾಗುತ್ತಿದೆ. ಶ್ವಾನ ಪ್ರದರ್ಶನ, ಚಿಕಿತ್ಸೆ ಹಾಗೂ ಶ್ವಾನಗಳನ್ನು ದತ್ತು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ತಿಳಿಸಿದರು.
ಶ್ವಾನ ಪಾರ್ಕ್ ಅನ್ನು ವೈಜ್ಞಾನಿಕ ರೀತಿಯಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಿಸಬೇಕು. ಶ್ವಾನ ಚಿಕಿತ್ಸೆ, ದತ್ತು, ಪ್ರದರ್ಶನ ಮತ್ತಿತರ ಚಟುವಟಿಕೆಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಈ ಕುರಿತು ದೇಶದ ಮಹಾನಗರಗಳಲ್ಲಿ ಇರುವ ಇಂತಹ ಶ್ವಾನ ಪಾರ್ಕ್ ಗಳ ಅಧ್ಯಯನ ನಡೆಸಿ ಸಮಗ್ರವಾದ ಯೋಜನೆಯನ್ನು ರೂಪಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಅಕ್ರಮ ಕಸಾಯಿಖಾನೆ ಬಂದ್ ಮಾಡಲು ಸೂಚನೆ:
ನಗರದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಗಳನ್ನು ಕೂಡಲೇ ಬಂದ್ ಮಾಡಬೇಕು. ಒಂದು ವೇಳೆ ನಿಯಮಾವಳಿ ಪ್ರಕಾರ ಟ್ರೇಡ್ ಲೈಸೆನ್ಸ್ ನೀಡಲು ಸಾಧ್ಯವಿದ್ದರೆ ತಕ್ಷಣವೇ ಲೈಸೆನ್ಸ್ ನೀಡಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಅದೇ ರೀತಿ ನಗರದ ಮಾಂಸ ಮಾರಾಟ ಅಂಗಡಿಗಳು ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳಬೇಕು ಹಾಗೂ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಲೈಸೆನ್ಸ್ ಇಲ್ಲದೇ ಮಾಂಸ ಮಾರಾಟ ಅಂಗಡಿಗಳು ಕಂಡುಬಂದರೆ ಅವುಗಳನ್ನು ಬಂದ್ ಮಾಡಿಸಬೇಕು ಎಂದು ತಿಳಿಸಿದರು.
ಈ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳ ಜತೆ ಜಂಟಿಯಾಗಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ಮಾಂಸ ಮಾರಾಟ ಅಂಗಡಿಗಳು ಕಡ್ಡಾಯವಾಗಿ ಪರದೆಗಳನ್ನು ಅಳವಡಿಸಬೇಕು. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು ಎಂದರು.