Breaking News

ಅವರು ಫೋನ್ ಮಾಡಿದ ನಂತರ ಹತ್ತು ನಿಮಿಷದಲ್ಲಿ ಸ್ಥಳಕ್ಕೆ JCB ಬಂದಿತ್ತು…!!

ಇದು ನಿಜವಾದ ಪ್ರಾಣಿ ದಯೆ, ಸ್ವಂದನೆಗೆ ವಂದನೆ…!!

ಸಾಮಾಜಿಕ ಸೇವೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿಯೇ ಅತ್ಯಂತ ಕ್ರೀಯಾಶೀಲವಾಗಿರುವ ಈ ಗೆಳೆಯರ ಬಳಗ ಭಿಕ್ಷುಕರಿಗೆ ಚಳಿಯಲ್ಲಿ ರಗ್ಗು, ಬೀದಿ ವ್ಯಾಪಾರಿಗಳಿಗೆ ಛತ್ರಿ,ಬೀದಿ ವ್ಯಾಪಾರಿಗಳ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಮತ್ತು ಸಹಾಯ,ನಿರ್ಗತಿಕರಿಗೆ ಚಿಕಿತ್ಸೆ ಹೀಗೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಫೇಸ್ ಬುಕ್ ಫ್ರೆಂಡ್ ಸರ್ಕಲ್ ಇವತ್ತು ನಗರದಲ್ಲಿ ಮೃತಪಟ್ಟಿದ್ದ ಎರಡು ಬಿಡಾಡಿ ಜಾನುವಾರಗಳನ್ನು ಅಂತ್ಯ ಸಂಸ್ಕಾರ ಮಾಡಲು ಶಹಾಪೂರದಲ್ಲಿ ಇರುವ ಜಾನುವಾರುಗಳ ಸ್ಮಶಾನ ಭೂಮಿಗೆ ಹೋದ ಸಂಧರ್ಭದಲ್ಲಿ ಜಾನುವಾರಗಳ ಅಂತ್ಯಕ್ರಿಯೆ ಮಾಡುವ ಸ್ಮಶಾನ ಭೂಮಿಯು ಕಸದ ತೊಟ್ಟಿಯಾಗಿರುವ ವಿಚಾರವನ್ನು ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರ ಗಮನಕ್ಕೆ ತಂದಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ,ಹಾಗೂ ಪಾಲಿಕೆ ಆಯುಕ್ತರಿಗೆ ಈ ವಿಚಾರ ಗೊತ್ತಾದ ಹತ್ತು ನಿಮಿಷದಲ್ಲೇ ಜೆಸಿಬಿ ಕಳುಹಿಸಿ ಜಾನುವಾರಗಳನ್ನು ಹುಗಿಯುವ ಆ ಸ್ಥಳವನ್ನು ಸ್ವಚ್ಛ ಗೊಳಿಸಿದ್ದಾರೆ.ಕೆಲವೇ ಗಂಟೆಗಳಲ್ಲಿ ಈ ಸ್ಮಶಾನ ಭೂಮಿ ಸ್ವಚ್ಛವಾಗಿದೆ. ಈ ಸ್ಮಾಶನ ಭೂಮಿ ಮೊದಲು ಹೇಗಿತ್ತು ಸ್ವಚ್ಛಗೊಳಿಸಿದ ನಂತರ ಹೇಗಾಯಿತು ಈ ಬಗ್ಗೆ Before ಮತ್ತು After ಎರಡೂ ಚಿತ್ರಗಳನ್ನು ಈ ಸುದ್ಧಿಯಲ್ಲಿ ಅಪಲೋಡ್ ಮಾಡಲಾಗಿದೆ.

ಸಾರ್ವಜನಿಕರ ಸಮಸ್ಯಗೆ ಅತ್ಯಂತ ತ್ವರಿತವಾಗಿ ಸ್ಪಂದಿಸಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ನಿಭಾಯಿಸಿರುವ ಕರ್ತವ್ಯ ನಿಜಕ್ಕೂ ಶ್ಲಾಘನೀಯ ವಾಗಿದೆ.

Also while clean the Burial area we found there is Small temple which was in bushes but there is no God idol inside it .
Facebook friends Circle team & Shri Ram Sena Hindustan team present were Santosh Darekar Avudhut Tudavekar Naru Nilajakar, Bharat Nagroli, Ashish Kurankar , Sujal Bagave , Rohit Sungar . Thank you .

 

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *