ಬೆಳಗಾವಿ-ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂಧರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿ ಅವರಿಗೆ ಮರಾಠಿ ಮೇಳಾವ್ ಮಾಡಲು ಅನುಮತಿ ನೀಡುವದಿಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಹೇಳಿದ್ದಾರೆ.
ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ನಗರ ಪೋಲೀಸ್ ಆಯುಕ್ತರು ಮತ್ತು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ನನ್ನ ಅಕ್ಕ ಪಕ್ಕದಲ್ಲಿ ಕುಳಿತಿದ್ದಾರೆ .ಅವರ ಸಮ್ಮುಖದಲ್ಲೇ ನಾನು ಹೇಳಿತ್ತಿದ್ದೇನೆ, ಎಂಇಎಸ್ ನವರಿಗೆ ಯಾವುದೇ ಕಾರಣಕ್ಕೂ ಮರಾಠಿ ಮೇಳಾವ್ ಮಾಡಲು ಅನುಮತಿ ಕೊಡೋದಿಲ್ಲ..ಕೊಡೋದಿಲ್ಲ ಎಂದು ಡಿಸಿ ಮಹ್ಮದ್ ರೋಷನ್ ಖಡಕ್ ನಿರ್ಧಾರವನ್ನು ಸ್ಪಷ್ಟಪಡಿಸಿದರು.ಅನುಮತಿ ಇಲ್ಲದೇ ಎಂಇಎಸ್ ನವರು ಕಾನೂನು ಬಾಹಿರವಾಗಿ ಮರಾಠಿ ಮೇಳಾವ್ ಮಾಡಲು ಮುಂದಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಮೇಳಾವ್ ಮಾಡಲು ಅವಕಾಶ ನೀಡುವದಿಲ್ಲ ಎಂದರು.
ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಢಾಧಿಕಾರಿ ಭೀಮಾಶಂಕರ ಗುಳೇದ ಮಾತನಾಡಿ ಮೇಳಾವ್ ನಡೆಸಲು ಕಳೆದ ವರ್ಷ ಮಹಾರಾಷ್ಡ್ರದಿಂದ ಬೆಳಗಾವಿ ಗಡಿ ಪ್ರದೇಶ ಪ್ರವೇಶ ಮಾಡಿದಾಗ ನಾವು ತಡೆದಿದ್ದೇವು,ಈ ವಿಚಾರದಲ್ಲಿ ಮಹಾರಾಷ್ಟ್ರ ಪೋಲೀಸರ ಜೊತೆ ಸಮನ್ವಯ ಇದೆ.ಈ ಬಾರಿಯೂ ಮಹಾರಾಷ್ಡ್ರದ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಮಾಡಿದ್ದೇವೆ. ಮೇಳಾವ್ ಮಾಡಲು ಮಹಾರಾಷ್ಟ್ರ ನಾಯಕರು ಬೆಳಗಾವಿ ಗಡಿ ಪ್ರವೇಶ ಮಾಡದಂತೆ ಈ ಬಾರಿಯೂ ತಡೆಯುತ್ತೇವೆ. ಎಂದು ಹೇಳಿದರು