ಅಟ್ರಾಸಿಟಿ ಕೇಸ್ ಗಳನ್ನು ತ್ವರಿತಗತಿಯಲ್ಲಿ ತನಿಖೆ ಮಾಡಿ- ಡಿಸಿ ಜಯರಾಂ

ಬೆಳಗಾವಿ-  ದಲಿತ ದೌರ್ಜನ್ಯ ಪ್ರಕರಣಕ್ಕೆ ದಮಂಧಿಸಿದಂತೆ ಅರವತ್ತು ದಿನಗಳಲ್ಲಿ ತನಿಖೆ ಮುಗಿಸಬೇಕು ಎನ್ನುವದು ನಿಯಮವಿದೆ ಆದರೆ ಬೆಳಗಾವಿ ಜಿಲ್ಲೆಯಲ್ಲಿ ಡಿಸೆಂಬರ ತಿಂಗಳಲ್ಲಿ 7 ಪ್ರಕರಣಗಳು ದಾಖಲಾಗಿದ್ದರೂ ಇನ್ನುವರೆಗೆ ತನಿಖೆ ಮುಗಿದಿಲ್ಲ ಪೋಲೀಸ್ ಅಧಿಕಾರಿಗಳು ತ್ವರಿತಗತಿಯಲ್ಲಿ ತನಿಖೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ಸೂಚಿಸಿದರು

ಜಿಲ್ಲಾಧಿಕಾರಿಗ ಅಧ್ಯಕ್ಷತೆಯಲ್ಲಿ ಅನಸೂಚಿತ ಜಾತಿ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಉಸ್ತುವಾರಿ ಸಮೀತಿ ಸಭೆ ನಡೆಯಿತು ಸಭೆಯಲ್ಲಿ ಮಾತನಾಡಿದ ಅವರು ದಲಿತ ದೌರ್ಜನ್ಯ ಪ್ರಕರಣಗಳಿಗೆ ಸಮಂಧಿದಿದಂತೆ ಪೋಲೀಸ್ ಅಧಿಕಾರಿಗಳು ತ್ವರಿತಗತಿಯಲ್ಲಿ ತನಿಖೆ ಮಾಡಿ ನಿಗಧಿತ ಅವಧಿಯಲ್ಲಿ ನಿಸ್ಪಕ್ಷಪಾತವಾದ ತನಿಖೆ ಪೂರ್ಣಗೊಳಿಸಬೇಕು ಎಂದು ಡಿಸಿ ಸೂಚನೆ ನೀಡಿದರು

ಅಟ್ರಾಸಿಟಿ ಕೇಸ್ ಗಳಿಗೆ ಸಮಂಧಿಸಿದಂತೆ ಕೆಲವರು ಪರಿಹಾರ ಪಡೆಯಲು ಕೇಸ್ ದಾಖಲಿಸುತ್ತಿರುವ ಕೆಲವು ಪ್ರಕರಣಗಳು ತಮ್ಮ ಗಮಕ್ಕೆ ಬಂದಿವೆ ಆದರೆ ಈ ರೀತಿ ದುರುಪಯೋಗ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ನೊಂದವರಿಗೆ ಪರಿಹಾರ ಸಿಗಬೇಕು ಈ ವಿಷಯದಲ್ಲಿ ಅಧಿಕಾರಿಗಳು ಮುತವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಡಿಸಿ ಅಧಿಕಾರಿಗಳಿಗೆ ತಾಕೀತು ಮಾಡಿದರು

ಜಿಲ್ಲೆಯ ಕೆಲವು ತಾಲೂಕಿನ ದಲಿತಕೇರಿಗಳಲ್ಲಿ ಸ್ಮಶಾನ ಭೂಮಿಗಾಗಿ ಪ್ರಸ್ತಾವನೆ ಗಳು ಬಂದಿದ್ದು ಉಪ ವಿಭಾಗಾಧಿಕಾರಿಗಳು ಸರ್ಕಾರಿ ಜಮೀನು ಇದ್ದಲ್ಲಿ ಸ್ಮಶಾನ ಭೂಮಿಗಳಿಗೆ ಭೂಮಿ ಒದಗಿಸಿಕೊಡಬೇಕು ಸರ್ಕಾರಿ ಭೂಮಿ ಇಲ್ಲದಿದ್ದರೆ ಖಾಸಗಿ ಜಮೀನು ಖರೀದಿ ಮಾಡಬೇಕು ಎಂದು ಡಿಸಿ ಜಯರಾಂ ಅಧಿಕಾರಿಗಳಿಗೆ ಸೂಚಿಸಿದರು

ದಲಿತ ನಾಯಕ ಮಲ್ಲೇಶ ಚೌಗಲೆ ಮಾತನಾಡಿ ನಗರದ ಕೆಲವು ಶಾಲೆಗಳಲ್ಲಿ ಶಿಕ್ಷಣದ ಹಕ್ಕು ಕಾಯ್ದೆ ಅಡಿಯಲ್ಲಿ ಪರಶಿಷ್ಡ ಜಾತಿ ಪರಶಿಷ್ಡ ಪಂಗಡದ ವಿಧ್ಯಾರ್ಥಿಗಳಿಗೆ ಸೀಟುಗಳು ಸಿಗುತ್ತಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *