ಬೆಳಗಾವಿ – ಬೆಳಗಾವಿ ಜಿಲ್ಲೆ ಅನಾಥ ಪ್ರಜ್ಞೆ ಅನುಭವಿಸುತ್ತಿದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿಸಿ ಗೆ ಕಪಾಳ ಮೋಕ್ಷ ಮಾಡಿದ್ರೂ ಕೇಸ್ ದಾಖಲು ಆಗೋದಿಲ್ಲ ಎಂದು ಮನವರಿಕೆ ಮಾಡಿಕೊಂಡ ಸಾರ್ವಜನಿಕರು ಡಿಸಿ ಚೇಂಬರ್ ಮೇಲ್ಭಾಗದಲ್ಲಿರುವ ಸ್ಪಂದನ ಕೇಂದ್ರದಲ್ಲಿ ತಮ್ಮ ದರ್ಪ ತೋರಿಸಿದ್ದಾರೆ
ಗಂಟೆ ಗಟ್ಟಲೇ ಕ್ಯು ನಲ್ಲಿ ನಿಂತರೂ ನಮ್ಮ ಅಹವಾಲು ಕೇಳೋರು ಯಾರೂ ಇಲ್ಲ ಅಂತ ಬೇಸತ್ತ ಸಾರ್ವಜನಿಕರು ಸಿಬ್ಬಂಧಿಯ ವರ್ತನೆಗೆ ಬೇಸತ್ತು ಸ್ಪಂದನ ಕೇಂದ್ರದ ಮೇಲೆ ದಾಳಿ ಮಾಡಿದ್ದಾರೆ ಕೇಂದ್ರದ ಗಾಜುಗಳನ್ನು ಪುಡಿ ಪುಡಿ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ
ಘಟನಾ ಸ್ಥಳಕ್ಕೆ ನಗರದ ಪೋಲೀಸರು ದೌಡಾಯಿಸಿ ಕೇಸ್ ಹಾಕಬೇಕೋ ಅಥವಾ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದ ಮಾದರಿಯಲ್ಲಿ ಈ ಕೇಸ್ ಮುಚ್ಚಿ ಹಾಕಬೇಕೋ ಎನ್ನುವ ಯೋಚನೆಯಲ್ಲಿ ತೊಡಗಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ