Breaking News
Home / Breaking News / ರಾಣಿ ಚನ್ನಮ್ಮ ಘಟನೆಗೂ ನನಗೂ ಸಮಂಧವಿಲ್ಲ – ಸತೀಶ ಜಾರಕಿಹೊಳಿ

ರಾಣಿ ಚನ್ನಮ್ಮ ಘಟನೆಗೂ ನನಗೂ ಸಮಂಧವಿಲ್ಲ – ಸತೀಶ ಜಾರಕಿಹೊಳಿ

ಬೆಳಗಾವಿ

ರಾಣಿಚನ್ನಮ್ಮ ವಿಶ್ವವಿದ್ಯಾಲಯವನ್ನು ಸಿಂಡಿಕೇಟ್ ಸದಸ್ಯ, ಬಿಜೆಪಿ ಮುಖಂಡ ರಾಜು ಜಿಕ್ಕನಗೌಡರ ಕೇಸರಿ ಕರಣ ಮಾಡಲು ಹೊರಟ್ಟಿದ್ದಾರೆ. ಅವರು ಮಾಡಿದ್ದ ಅವ್ಯವಹಾರಗಳನ್ನು ಬಯಲು ಮಾಡಲು ಹೊರಾಟ ನಡೆಸಲಾಗುವುದು ಎಂದು ಶಾಸಕ ಸತೀಶ ಜಾರಕಿಹೊಳಿ‌ ಹೇಳಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ಇತ್ತೀಚೆಗೆ ರಾಣಿಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ನಡೆದ ವಿಸಿ ಮೇಲೆ ಹಲ್ಲೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಬಹಳಷ್ಟು ವಿಷಯದ ಕುರಿತು ಸಾರ್ವಜನಿಕರು ಅಲ್ಲಿ ಚರ್ಚೆ ನಡೆಸಲು ಹೋಗಿದ್ದರು. ಅನಿವಾರ್ಯದಿಂದ ಅದು ಆಗಿದೆ. ಅದು ಆಗಬಾರದಿತ್ತು. ಆಗಿದೆ.

ಸಂಸದ ಸುರೇಶ ಅಂಗಡಿ ಸಾಕಷ್ಟು ಆರೋಪ ಮಾಡಿದ್ದಾರೆ. ವಿವಿಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಹತ್ತು ವರ್ಷಗಳಿಂದ ಅವರು ಆರೋಪ ಮಾಡಿದ್ದಾರೆ. ಅದು ಹೊಸತೇನಲ್ಲ. ಸಂಸದರ ವ್ಯಾಪ್ತಿಗೆ ಬರುವುದೇ ಇಲ್ಲ. ಚಿಕ್ಕೋಡಿ- ಸದಲಗಾ ಸಂಸದ ಪ್ರಕಾಶ ಹುಕ್ಕೇರಿಯವರ ವ್ಯಾಪ್ತಿಗೆ ಬರುತ್ತದೆ. ಅವರು ನಮಗೆ ಕರೆ ಮಾಡಿ ಆಹ್ವಾನ‌ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ರಾಣಿಚನ್ನಮ್ಮ ವಿವಿಯಲ್ಲಿ ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ ವಿವಿಯನ್ನು ಕೇಸರಿಕರಣ ಮಾಡುತ್ತಿದ್ದಾರೆ. ಸಮಸ್ಯೆ ಇರುವುದೇ ಅಲ್ಲಿ. ಒಂದೂವರೆ ವರ್ಷದಿಂದ ಅಲ್ಲಿ ಅವರು ಸಿಂಡಿಕೇಟ್ ಸದಸ್ಯರಿದ್ದಾರೆ. ಇದರಿಂದ ಅಲ್ಲಿನ ಸಾರ್ವಜನಿಕರಲ್ಲಿ ಅಸಮಾಧಾನವಿದೆ.

ವಿಸಿ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಯಾರೂ ದೂರು ನೀಡಿಲ್ಲ. ನಾನು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕುವ ಸಂಬಂಧವಿಲ್ಲ. ಇದು ವಿಸಿಗೂ ನಮಗೂ ಸಂಬಂಧವಿಲ್ಲ. ನಮ್ಮ ಹೋರಾಟ ಕೇಸರಿಕರಣ‌ ಮಾಡುತ್ತಿರುವ ಚಿಕ್ಕನಗೌಡರ ವಿರುದ್ಧ ಹೋರಾಟ ನಡೆಸಲಾಗುವುದು.
ಎಬಿವಿಪಿ ಕಾರ್ಯಕರ್ತರು ಇದನ್ನು ವೈಭವಿಕರಣಗೊಳ್ಳಿಸುತ್ತಿದ್ದಾರೆ. ಕೇವಲ 35 ಜನ ಹೋರಾಟ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ರಾಜು ಚಿಕ್ಕನಗೌಡರ ಕಂಪ್ಯೂಟರ್ ಖರೀದಿಯಲ್ಲಿ ಹಗರಣ ಮಾಡಿದ್ದಾರೆ. ನೇಮಕಾತಿಯಲ್ಲಿ ಅಕ್ರಮವಾಗಿ ಮಾಡಿದ್ದಾರೆ. ಅದು ನಮ್ಮ ಗಮನಕ್ಕೆ ಬಂದಿದೆ. ಎಬಿವಿಪಿ, ಪಕ್ಷದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ.

ವಿವಿಯಲ್ಲಿ ಅಕ್ರಮ ವ್ಯವಹಾರ ನಡೆದಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ವಿವಿಯಲ್ಲಿ ರಾಜಕೀಯ ಮಾಡಬಾರದು ನಾವು ಸಹ ಹತ್ತು ವರ್ಷದಿಂದ ಅಲ್ಲಿಂದ ದೂರವಾಗಿದ್ದೆ. ಆದರೆ ಅವರು ರಾಜಕೀಯ ಮಾಡುವಾಗ ನಾವು ಇನ್ನ ಮೇಲೆ ರಾಜಕೀಯ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ತಮ್ಮ ಮುಖ್ಯ ಎಂಜಿನಿಯರ್, ಪೊಲೀಸ್ ಅಧಿಕಾರಿ ಸೇರಿದಂತೆ ಸರಕಾರಿ ನೌಕರರ ಮೇಲೆ ಹಲ್ಲೆ ಮಾಡಿದರು. ಸಂಸದ ಸುರೇಶ ಅಂಗಡಿ ಅವರು ಏಕೆ ಪ್ರಶ್ನೆ ಮಾಡಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಸಂಸದ ಸುರೇಶ ಅಂಗಡಿ ಅವರಿಗೆ ಗೋಕಾಕ ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಹೇಳುವುದು ಸರಿಯಲ್ಲ. ಅಧಿಕಾರಿಗಳಿಗೆ ಕೇಳುವುದನ್ನು ಬಿಟ್ಟು ವಿತಂಡ ವಾದ ಹಾಕುವುದು ಸರಿಯಲ್ಲ ಎಂದರು.

Check Also

ಬುಧವಾರ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆ ಗ್ರ್ಯಾಂಡ್ ವೆಲ್ ಕಮ್…!!!

ಬೆಳಗಾವಿ: ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗದೀಶ್ ಶೆಟ್ಟರ್ ಅವರು ನಾಳೆ ಬುಧವಾರ ಬೆಳಗಾವಿಗೆ ಬರಲಿದ್ದು ಬೆಳಗಾವಿಯ ಬಿಜೆಪಿ …

Leave a Reply

Your email address will not be published. Required fields are marked *