ಬೆಳಗಾವಿ- ಗಂಡ,ಹೆಂಡತಿ,ಇಬ್ಬರು ಹೆಣ್ಣು ಮಕ್ಕಳೊಂದಿದೆ ಬೆಳಗಾವಿಯ ಡಿಸಿ ಕಚೇರಿಯ ಎದುರು ಕುಳಿತುಕೊಂಡಿದ್ದಾರೆ.ನ್ಯಾಯ ಎಲ್ಲಿದೆ ಅಂತಾ ಕೇಳುತ್ತಿದ್ದಾರೆ.
ನ್ಯಾಯ ಸಿಗೋವರೆಗೂ ಅಹೋರಾತ್ರಿ ಧರಣಿ ಮಾಡುತ್ತೇವೆ,ಅಲ್ಲಿಯವರೆಗೆ ಇಲ್ಲಿಯೇ ಕುಳಿತುಕಿಳ್ಳುತ್ತೇವೆ ಅಂತ,ಈ ಕುಟುಂಬ ಡಿಸಿ ಕಚೇರಿ ಎದುರು ಧರಣಿ ಆರಂಭಿಸಿದೆ.
ರಾಯಬಾಗ ತಾಲ್ಲೂಕಿನ, ನರಸಲಾಪೂರ ಗ್ರಾಮದ ಸಂಗೀತಾ ಬಂಡು ಚಾವರೆ ಕುಟುಂಬ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.ಈವರ ಪಾಲಿಗೆ ಬರುವ ಜಮೀನು ಮತ್ತು ಆಸ್ತಿಯನ್ನು,ಇವರ ಸಮಂಧಿಕರು ಮಾಡಿಕೊಡುತ್ತಿಲ್ಲ,ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎನ್ನುವ ಕಾರಣಕ್ಕಾಗಿ ನಮಗೆ ತೊಂದರೆ ಕೊಡುತ್ತಿದ್ದಾರೆ,ಈ ಕುರಿತು ಪೋಲೀಸ್ ಠಾಣೆ,ತಹಶೀಲ್ದಾರ್,ಎಲ್ಲ ಕಡೆ ಸುತ್ತಾಡಿದರೂ ಸಮಂಧಿಕರ ಕಾಟ ನಿಂತಿಲ್ಲ,ಅವರು ಕೊಡುತ್ತಿರುವ ಕಾಟದಿಂದ ಆಸ್ತಿ,ಪಾಸ್ತಿ,ಬಿಟ್ಟು ಊರು ಬಿಡುವಂತಾಗಿದೆ,ನಮಗೆ ನ್ಯಾಯ ಕೊಡಿ ಎಂದು ಆ ತಾಯಿ ಇಬ್ಬರು ಹೆಣ್ಣು ಮಕ್ಕಳ ಜೊತೆ ಏಕಾಂಗಿ ಹೋರಾಟ ನಡೆಸಿದ್ದಾಳೆ.
ನಮ್ಮ ಪಾಲಿನ ಆಸ್ತಿ ನಮಗೆ ಸಿಗಬೇಕು,ನಮ್ಮ ಪಾಲೀನ ಜಮೀನು ಸರ್ವೇ ಮಾಡಿ ನಮಗೆ ಕೊಡಬೇಕು,ಸಮಂಧಿಕರು ಕೊಡುತ್ತಿರುವ ಕಾಟಕ್ಕೆ ಅಂತ್ಯ ಕಾಣಿಸಬೇಕು,ಅಲ್ಲಿಯವರೆಗೆ ಅಹೋರಾತ್ರಿ ಉಪವಾಸ ಮಾಡುತ್ತೇವೆ,ನ್ಯಾಯ ಸಿಗೋವರೆಗೆ ಊರಿಗೆ ಹೋಗಲ್ಲಾ ಅಂತಾರೆ ಇವರು.
ನ್ಯಾಯ ಕೇಳಲು ಬಂದಿರುವ ಈ ಕುಟುಂಬಕ್ಕೆ ರಕ್ಷಣೆ ಕೊಡಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಮುಂದಾಗಬೇಕು,ಇವರ ಆಸ್ತಿ ಇವರಿಗೆ ಕೊಡಲು,ಇವರ ಸಮಂಧಿಕರು ಯಾಕೆ ಮುಂದಾಗುತ್ತಿಲ್ಲ ಎನ್ನುವದರ ಬಗ್ಗೆ ಪರಶೀಲಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.